ಪುತ್ತೂರು-ಗಡಿಪ್ಪಿಲ: ರೈಲು ಡಿಕ್ಕಿ, ಕಾಡು ಕೋಣಗಳ ಸಾವು

ಪುತ್ತೂರು-ಗಡಿಪ್ಪಿಲ: ರೈಲು ಡಿಕ್ಕಿ, ಕಾಡು ಕೋಣಗಳ ಸಾವು

ನೇಸರ ಮಾ.17: ಪುತ್ತೂರು ನರಿಮೊಗರು ಗ್ರಾಮದ ಗಡಿಪ್ಪಿಲ ರೈಲ್ವೆ ಹಳಿಯಲ್ಲಿ ಕಾಡುಕೋಣ ಮತ್ತು ಅದರ ಮರಿ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಮ.17ರಂದು ಬೆಳಿಗ್ಗೆ ನಡೆದಿದೆ.
ಸ್ಥಳೀಯ ಕೃಷಿ ತೋಟಗಳಿಗೆ ಮೇವು ಅರಸಿ ಬಂದಿದ್ದ ಕಾಡುಕೋಣಗಳು ಬೆಳಗ್ಗೆ ಮರಳಿ ಕಾಡು ಸೇರಲು ರೈಲ್ವೆ ಹಳಿಯಲ್ಲಿ ಹೋಗುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದೆ. ಘಟನಾ ಸ್ಥಳಕ್ಕೆ ಎಸಿಎಫ್ ಕಾರ್ಯಪ್ಪ, ಪುತ್ತೂರು ವಲಯಾರಣ್ಯಾಧಿಕಾರಿ ಕಿರಣ್, ನರಿಮೊಗರು ಉಪ ವಲಯಾರಣ್ಯಾಧಿಕಾರಿ ಕುಮಾರಸ್ವಾಮಿ, ಪುತ್ತೂರು ಉಪ ವಲಯಾರಣ್ಯಾಧಿಕಾರಿ ಶಿವಾನಂದ ಆಚಾರ್ಯ, ಅರಣ್ಯ ರಕ್ಷಕರಾದ ಸತ್ಯನ್ ಡಿ.ಜಿ ಹಾಗೂ ದೀಪಕ್ ಭೇಟಿ ನೀಡಿ ಸಾವನ್ನಪ್ಪಿದ ಕಾಡುಕೋಣಗಳ ಮರಣೋತ್ತರ ಮಹಜರು ನಡೆಸಿದರು.

ವೀಕ್ಷಿಸಿ Subscribers ಮಾಡಿ
Previous post

ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘ(ನಿ), ಅಧ್ಯಕ್ಷರಾಗಿ ಡಾ.ರಾಜಾರಾಮ ಕೆ.ಬಿ, ಉಪಾಧ್ಯಕ್ಷರಾಗಿ ಅಜಿತ್ ಪಾಲೇರಿ ಆಯ್ಕೆ

Next post

ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ “ಭಕ್ತಿದ ಪೊರ್ಪ” ಭಕ್ತಿಗೀತೆ ಬಿಡುಗಡೆ

Leave a Reply

You May Have Missed

error: Content is protected !!