ಕೊಕ್ಕಡ: ಫೆ.3 – 4 ನೆಕ್ಕರ್ಲ ಶ್ರೀ ನೆತ್ತರು ಮುಗುಳಿ ದೈವಸ್ಥಾನದಲ್ಲಿ ದೈವ ನರ್ತನ ಸೇವೆ

ಕೊಕ್ಕಡ: ಫೆ.4–5 ನೆಕ್ಕರ್ಲ ಶ್ರೀ ನೆತ್ತರು ಮುಗುಳಿ ದೈವಸ್ಥಾನದಲ್ಲಿ ದೈವ ನರ್ತನ ಸೇವೆ

ಕೊಕ್ಕಡ: ಫೆ.3 – 4 ನೆಕ್ಕರ್ಲ ಶ್ರೀ ನೆತ್ತರು ಮುಗುಳಿ ದೈವಸ್ಥಾನದಲ್ಲಿ ದೈವ ನರ್ತನ ಸೇವೆ

ಕೊಕ್ಕಡ: ನೆಕ್ಕರ್ಲ ಶ್ರೀ ನೆತ್ತರು ಮುಗುಳಿ ದೈವಸ್ಥಾನದಲ್ಲಿ ಫೆ.3 ಮತ್ತು 4ರಂದು ಬಿರ್ಮೆರ್, ಧೂಮಾವತಿ, ಕುಂಡಲ ಚಾಮುಂಡಿ ಹಾಗೂ ಪಿಲಿಚಾಮುಂಡಿ ದೈವಗಳ ಭವ್ಯ ನರ್ತನ ಸೇವೆ ಜರುಗಲಿದೆ.

ಫೆ.3ರಂದು ರಾತ್ರಿ 7ಕ್ಕೆ ದೈವಸ್ಥಾನದಿಂದ ಭಂಡಾರ ಹೊರಟು, ರಾತ್ರಿ 9ರಿಂದ ಬಿರ್ಮೆರ್, ಧೂಮಾವತಿ, ಕುಂಡಲ ಚಾಮುಂಡಿ ಹಾಗೂ ಪಿಲಿಚಾಮುಂಡಿ ದೈವಗಳ ನರ್ತನ ಆರಂಭವಾಗಲಿದೆ.

ಫೆ.4ರಂದು ಬೆಳಿಗ್ಗೆ 9ಕ್ಕೆ ಪಿಲಿಚಾಮುಂಡಿ ದೈವದ ನರ್ತನ ಪ್ರಾರಂಭವಾಗಿ, ಮಧ್ಯಾಹ್ನ ಅನ್ನ ಸಂತರ್ಪಣೆಯ ನಂತರ 2:30ಕ್ಕೆ ಶ್ರೀ ನೆತ್ತರು ಮುಗುಳಿ ದೈವ ನೆಕ್ಕರ್ಲ ಭೂತ ಗುಂಡಿಯಲ್ಲಿ ಸ್ನಾನ ಮಾಡಿ ನರ್ತನ ಸ್ಥಳಕ್ಕೆ ಆಗಮಿಸುವರು. ನರ್ತನ ಸೇವೆ, ಗ್ರಾಮಸ್ಥರ ಹರಕೆ ಸಂದಾಯ, ಪ್ರಾರ್ಥನೆ ಹಾಗೂ ಕೈಕಾಣಿಕೆ ಸಲ್ಲಿಕೆ ನಡೆದ ನಂತರ ಸಂಜೆ 5:30ಕ್ಕೆ ಭಂಡಾರ ದೈವಸ್ಥಾನಕ್ಕೆ ಮರಳಲಿದೆ ಎಂದು ಎನ್‌.ವಿ. ವ್ಯಾಸ ನೆಕ್ಕರ್ಲ ತಿಳಿಸಿದ್ದಾರೆ.

Leave a Reply

You May Have Missed

error: Content is protected !!