ಗೇರು ತೋಟಕ್ಕೆ ಬೆಂಕಿ – ಸಾವಿರಾರು ರೂ. ಮೌಲ್ಯದ ಮರಮಟ್ಟಿಗೆ ಹಾನಿ

ಗೇರು ತೋಟಕ್ಕೆ ಬೆಂಕಿ – ಸಾವಿರಾರು ರೂ. ಮೌಲ್ಯದ ಮರಮಟ್ಟಿಗೆ ಹಾನಿ

ಗೇರು ತೋಟಕ್ಕೆ ಬೆಂಕಿ – ಸಾವಿರಾರು ರೂ. ಮೌಲ್ಯದ ಮರಮಟ್ಟಿಗೆ ಹಾನಿ

ಬೆಳ್ತಂಗಡಿ: ಕರಂಬಾರು ಗ್ರಾಮದ ಕಾಜಿಮುಗೇರು ಪ್ರದೇಶದಲ್ಲಿ ಭಾನುವಾರ ಸಂಜೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಗೇರುತೋಟವೇ ಸುಟ್ಟು ಸುಟ್ಟು ಹೋಗಿದ ದುರ್ಘಟನೆ ನಡೆದಿದೆ.

ಸ್ಥಳೀಯ ಎಂ.ಜಿ. ಬಾಪಟ್ ಅವರ ಗೇರುತೋಟಕ್ಕೆ ವಿದ್ಯುತ್ ಪರಿವರ್ತಕದಲ್ಲಿ ಉಂಟಾದ ಕಿಡಿಗಳು ಹರಡಿಕೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, 50 ಕ್ಕೂ ಹೆಚ್ಚು ಗೇರುಮರಗಳು ಸೇರಿದಂತೆ ಹಲವು ಮರಮಟ್ಟಿಗೆ ಭಾರೀ ಹಾನಿಯಾಗಿದೆ. ಬೆಂಕಿ ಒಂದೇ ಕ್ಷಣದಲ್ಲಿ ತೋಟದೊಳಗೆ ವ್ಯಾಪಕವಾಗಿ ಹರಡಿಕೊಂಡಿದ್ದು, ಸಾವಿರಾರು ರೂಪಾಯಿ ಮೌಲ್ಯದ ಗೇರುಮರಗಳು, ಸಸಿಗಳು ಹಾಗೂ ಇತರ ಮರಮಟ್ಟಿ ಸುಟ್ಟು ಕರಕಲಾಗಿದೆ.

ಘಟನೆ ಗಮನಿಸಿದ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

ಅವರೊಂದಿಗೆ ಗ್ರಾಮಸ್ಥರು ಸಹ ಸಕ್ರಿಯವಾಗಿ ಬೆಂಕಿ ನಿಯಂತ್ರಣಕ್ಕೆ ಸಹಕರಿಸಿದರು. ಸಮಯೋಚಿತ ಕ್ರಮದಿಂದ ಬೆಂಕಿ ಇನ್ನಷ್ಟು ವ್ಯಾಪಕವಾಗುವುದು ತಪ್ಪಿದರೂ, ಈಗಾಗಲೇ ದೊಡ್ಡ ಪ್ರಮಾಣದ ಆರ್ಥಿಕ ನಷ್ಟ ಸಂಭವಿಸಿದೆ.

Previous post

ಕೊಕ್ಕಡ: ಉಪ್ಪಾರಪಳಿಕೆಯ ರಸ್ತೆಗೆ ಶ್ರಮದಾನದ ಮೂಲಕ ಸಾರ್ವಜನಿಕರಿಂದ ಹೊಂಡಗಳಿಗೆ ಕಾಂಕ್ರೀಟ್

Next post

ನೆಲ್ಯಾಡಿ ನಿವಾಸಿ ಕೆ.ಸಿ. ವರ್ಗೀಸ್ ಸಾವು ಪ್ರಕರಣ – ಶವ ಪರೀಕ್ಷೆಯಲ್ಲಿ ಬಯಲಾದ ರಹಸ್ಯ: ಬಲವಾದ ಪೆಟ್ಟುಗಳಿಂದ ಮರಣ, ಕೊಲೆ ಕೇಸು ದಾಖಲು – ಪುತ್ರ ಹಾಗೂ ಭಾವಂದಿರಿಬ್ಬರು ಬಂಧನ

Leave a Reply

You May Have Missed

error: Content is protected !!