ಪಟ್ಲಡ್ಕ ಶ್ರೀ ಗಡಿಯಾಡಿ ಆದಿಮೊಗೇರ್ಕಳ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ: ಸ್ವಾಮಿ ಕೊರಗಜ್ಜ ದೈವದ ಕೋಲ

ಪಟ್ಲಡ್ಕ ಶ್ರೀ ಗಡಿಯಾಡಿ ಆದಿಮೊಗೇರ್ಕಳ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ: ಸ್ವಾಮಿ ಕೊರಗಜ್ಜ ದೈವದ ಕೋಲ

ಪಟ್ಲಡ್ಕ ಶ್ರೀ ಗಡಿಯಾಡಿ ಆದಿಮೊಗೇರ್ಕಳ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ: ಸ್ವಾಮಿ ಕೊರಗಜ್ಜ ದೈವದ ಕೋಲ

ನೆಲ್ಯಾಡಿ: ಪಟ್ಲಡ್ಕ ಶ್ರೀ ಗಡಿಯಾಡಿ ಆದಿಮೊಗೇರ್ಕಳ ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಫೆ.14 ಮತ್ತು 15ರಂದು ಭಕ್ತಿಭಾವದಿಂದ ವಾರ್ಷಿಕ ನೇಮೋತ್ಸವ ಹಾಗೂ ದೈವದ ಕೋಲ, ಗರಡಿ ಇಳಿಯುವಿಕೆ ಮತ್ತು ಅಗೇಲು ಸೇವೆಗಳು ನಡೆಯಿತು.

ಫೆ.14ರಂದು ಬೆಳಗ್ಗೆ 8ಕ್ಕೆ ಸ್ಥಳ ಶುದ್ಧಿ ಮತ್ತು ಗಣ ಹೋಮ. ಸಂಜೆ 5.30ರಿಂದ ಕುಣಿತ–ಭಜನಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 8ಕ್ಕೆ ಅನ್ನಸಂತರ್ಪಣೆಯ ಬಳಿಕ ಶ್ರೀ ಗಡಿಯಾಡಿ ಆದಿಮೊಗೇರ್ಕಳ ದೈವಗಳ ಗರಡಿ ಇಳಿಯಲಿದೆ. ನಂತರ ರಾತ್ರಿ 12ಕ್ಕೆ ಶ್ರೀ ತನ್ನಿಮಾನಿಗ ದೈವದ ಗರಡಿ ಇಳಿಯುವ ಮಹತ್ವದ ವಿಧಿ ನಡೆಯಿತು.

ಫೆ.15ರಂದು ಬೆಳಿಗ್ಗೆ 7ಕ್ಕೆ ಸ್ವಾಮಿ ಕೊರಗಜ್ಜ ದೈವದ ಕೋಲ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಭಕ್ತರ ಹರಕೆಗಳ ಅಗೇಲು ಸೇವೆ ಜರುಗಲಿದ್ದು, ಬಳಿಕ ಅನ್ನಸಂತರ್ಪಣೆಯೊಂದಿಗೆ ನೇಮೋತ್ಸವದ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಂಡಿತು. ಭಕ್ತಾದಿಗಳಿಂದ ಸುಮಾರು 300 ರಷ್ಟು ಅಗೆಲು ಸೇವೆ ನಡೆಯಿತು.

ಸಮಿತಿ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ, ಪ್ರಧಾನ ಕಾರ್ಯದರ್ಶಿ ದೀಕ್ಷಾ ಸಾಲ್ಯಾನ್, ಕೋಶಾಧಿಕಾರಿ ಪ್ರಕಾಶ್ ರೈ, ಉಪಾಧ್ಯಕ್ಷ ಹರೀಶ್ ಪಿ. ಪಟ್ಲಡ್ಕ, ಗಿರೀಶ್ ಡಿ. ನೆಲ್ಯಾಡಿ, ಗುರಿಕಾರ ವಿಶ್ವನಾಥ ಪಟ್ಲಡ್ಕ, ಜೊತೆಗೆ ಕಾರ್ಯದರ್ಶಿ ಮಕರಂದ, ಮಹೇಶ್ ಪಟ್ಲಡ್ಕ, ವಾರ್ಷಿಕ ನೇಮೋತ್ಸವ ಸಮಿತಿ ಕೋಶಾಧಿಕಾರಿ ಸತೀಶ್ ಪಟ್ಲಡ್ಕ, ವಾರ್ಷಿಕ ನೇಮೋತ್ಸವ ಸಮಿತಿ ಉಪಾಧ್ಯಕ್ಷ ಪ್ರಕಾಶ್ ಶ್ರೀ ಲಕ್ಷ್ಮಿ ಆಟೋ ಹಾಗೂ ಸಮಿತಿ ಪದಾಧಿಕಾರಿಗಳು ಹಾಗೂ ರಾಜ್ಯದ ನಾನಾ ಮೂಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು.

Previous post

ನೆಲ್ಯಾಡಿ ನಿವಾಸಿ ಕೆ.ಸಿ. ವರ್ಗೀಸ್ ಸಾವು ಪ್ರಕರಣ – ಶವ ಪರೀಕ್ಷೆಯಲ್ಲಿ ಬಯಲಾದ ರಹಸ್ಯ: ಬಲವಾದ ಪೆಟ್ಟುಗಳಿಂದ ಮರಣ, ಕೊಲೆ ಕೇಸು ದಾಖಲು – ಪುತ್ರ ಹಾಗೂ ಭಾವಂದಿರಿಬ್ಬರು ಬಂಧನ

Next post

ಸಿಬ್ಬಂದಿ–ಜೀವ ರಕ್ಷಕಗಳ ಕೊರತೆಯ ಮಧ್ಯೆ ಹುಲಿ ಗಣತಿ ಆರಂಭ; ಸಮೀಕ್ಷೆ ವೇಳೆ ನೌಕರನ ಮೇಲೆ ಕಾಡು ಹಂದಿ ದಾಳಿ – ಸರ್ಕಾರಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಆಕ್ರೋಶ

Leave a Reply

You May Have Missed

error: Content is protected !!