ಮೋಸ್ಟ್ ವಾಂಟೆಡ್ ನಕ್ಸಲ್ ಜಯಣ್ಣ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

ಮೋಸ್ಟ್ ವಾಂಟೆಡ್ ನಕ್ಸಲ್ ಜಯಣ್ಣ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

ಮೋಸ್ಟ್ ವಾಂಟೆಡ್ ನಕ್ಸಲ್ ಜಯಣ್ಣ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

ಬೆಳ್ತಂಗಡಿ: ಕುತ್ಲೂರು ಎಂಬಲ್ಲಿ 2012ರಲ್ಲಿ ನಕ್ಸಲ್ ಕರಪತ್ರ ಹಚ್ಚಿದ ಪ್ರಕರಣಕ್ಕೆ ಸಂಬಂದಿಸಿದ್ದಂತೆ ನಕ್ಸಲ್ ಮಹೇಶ್ @ಜಯಣ್ಣ@ಜಾನ್ (49) ಅವರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಫೆ.19 ರಂದು ಗುರುವಾರ ಹಾಜರುಪಡಿಸಲಾಯಿತು.

ಕೇರಳ ರಾಜ್ಯದ ತ್ರಿಶೂರ್ ಜೈಲಿನಿಂದ ಬಂಧಿತ ನಕ್ಸಲ್ ಮಹೇಶ್@ಜಯಣ್ಣ@ಜಾನ್ ಅವರನ್ನು ಕೇರಳ ರಾಜ್ಯದ ಪೊಲೀಸರು ಬಿಗಿ ಭದ್ರತೆಯೊಂದಿಗೆ ಫೆ.19 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

ಮೊಸ್ಟ್ ವಾಟೆಂಡ್ ನಕ್ಸಲ್ ಆಗಿದ್ದ ಮಹೇಶ್ ಮೂಲಃತ ರಾಯಚೂರು ಜಿಲ್ಲೆಯ ಅರೋಲಿ ಗ್ರಾಮ ಕುಡುಡಿ ಮುಖ್ಯ ರಸ್ತೆಯ ಹನುವ್ವನ ದೂತರ ಮಠದ ಎದುರಿನ ಅಂಬೇಡ್ಕ‌ರ್ ಕಾಲನಿಯ ಮಹೇಶ್ ಆಲಿಯಾಸ್ ಜಯಣ್ಣ ಆಲಿಯಾಸ್ ಜಾನ್ ಆಲಿಯಾಸ್ ಮಾರಪ್ಪ ಎಂಬ ಹೆಸರುಗಳಿವೆ.

ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2012 ರಲ್ಲಿ ಕುತ್ಲೂರು ಲಿಂಗಪ್ಪ ಮಲೆಕುಡಿಯ ಮನೆಯ ಅಂಗಳದಲ್ಲಿ ನಕ್ಸಲ್ ಕರಪತ್ರ ಹಚ್ಚಿದ್ದ ಪ್ರಕರಣವನ್ನು ಮರು ತನಿಖೆಗೆ ಆದೇಶ ಹೊರಡಿಸಿದ ಕಾರಣ ಅವರನ್ನು ಬೆಳ್ತಂಗಡಿ ನ್ಯಾಯಲಕ್ಕೆ ಹಾಜರು ಪಡಿಸಲಾಗಿದೆ. ಕಳೆದ ಆರು ತಿಂಗಳಿಂದ ಕೇರಳದ ಜೈಲಿನಲ್ಲಿದ್ದಾರೆ, ಕರ್ನಾಟಕದ ನಕ್ಸಲ್ ಮುಖಂಡರುಗಳೊಂದಿಗೆ ಮಹೇಶ್ ಅವರೂ ರಾಜ್ಯದ ಸಿಎಂ ಮುಂದೆ ಶರಣಾತಿಯಾಗಿದ್ದರು.

Leave a Reply

You May Have Missed

error: Content is protected !!