ಉರುವಾಲು ಗ್ರಾಮ ಶ್ರೀ ವನಶಾಸ್ತಾರ ಮತ್ತು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2.50ಲಕ್ಷ ಡಿ ಡಿ ಹಸ್ತಾಂತರ

Belthangady: ಉರುವಾಲು ಗ್ರಾಮ ಶ್ರೀ ವನಶಾಸ್ತಾರ ಮತ್ತು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2.50ಲಕ್ಷ ಡಿ ಡಿ ಹಸ್ತಾಂತರ

ಉರುವಾಲು ಗ್ರಾಮ ಶ್ರೀ ವನಶಾಸ್ತಾರ ಮತ್ತು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2.50ಲಕ್ಷ ಡಿ ಡಿ ಹಸ್ತಾಂತರ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಗುರುವಾಯನಕೆರೆ ತಾಲೂಕು, ಕಣಿಯೂರು ವಲಯದ ಉರುವಾಲು ಗ್ರಾಮದ ಕಾರಿಂಜ ಶ್ರೀ ವನಶಾಸ್ತಾರ ಮತ್ತು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ದಿಂದ ಮಂಜೂರಾದ 2.50 ಲಕ್ಷದ ಡಿ.ಡಿ ವಿತರಣೆಯನ್ನು ಜಿಲ್ಲಾ ನಿರ್ದೇಶಕ ದಿನೇಶ್.ಡಿ ಹಾಗೂ ಯೋಜನಾಧಿಕಾರಿ ಅಶೋಕ್ ರವರು ವಿತರಣೆ ಮಾಡಿದರು.

ಈ ಸಂಧರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯೋಗೀಶ್ ಪೂಜಾರಿ ಕಡ್ತಿಲ, ಕಾರ್ಯಾಧ್ಯಕ್ಷ ಸುನಿಲ್ ಅಣವು, ಜೀರ್ಣೋಧಾರ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ ಕೋಡಿಯಡ್ಕ, ಆಡಳಿತ ಸಮಿತಿ ಅಧ್ಯಕ್ಷ ಕೊರಗಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಯಶವಂತ್, ಜನದೀಶ್ ಶೆಟ್ಟಿ ಮೈರಾ ಕರಾಯ, ವಿಠಲ ಸಾಲ್ಯಾನ್, ಕೃಷ್ಣಪ್ರಸಾದ್, ನವಜೀವನ ಸಮಿತಿ ರಮೇಶ್, ಒಕ್ಕೂಟದ ಅಧ್ಯಕ್ಷ ಪ್ರಶಾಂತ್, ಮೋಹನ ಶೆಟ್ಟಿ, ವಲಯದ ಮೇಲ್ವಿಚಾರಕ ಶಿಲ್ಪಾ, ಸೇವಾಪ್ರತಿನಿಧಿಗಳಾದ ಸೀತಾರಾಮ ಆಳ್ವ, ಸವಿತಾ, ಹಾಗೂ ಜೀರ್ಣೋದ್ದಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು ಮತ್ತು ಊರಿನ ನಮಸ್ತರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!