ಕೊಕ್ಕಡ ಬರಮೇಲು ಬಳಿ ಕಾರು–ಬೈಕ್ ಡಿಕ್ಕಿ; ಬೈಕ್ ಸವಾರನಿಗೆ ಗಂಭೀರ ಗಾಯ

Kokkada: ಕೊಕ್ಕಡ ಬರಮೇಲು ಬಳಿ ಕಾರು–ಬೈಕ್ ಡಿಕ್ಕಿ; ಬೈಕ್ ಸವಾರನಿಗೆ ಗಂಭೀರ ಗಾಯ

ಕೊಕ್ಕಡ ಬರಮೇಲು ಬಳಿ ಕಾರು–ಬೈಕ್ ಡಿಕ್ಕಿ; ಬೈಕ್ ಸವಾರನಿಗೆ ಗಂಭೀರ ಗಾಯ

ಕೊಕ್ಕಡ: ಕೊಕ್ಕಡ ಗ್ರಾಮದ ಬರಮೇಲು ಸಮೀಪ ಸೋಮವಾರ ಮುಂಜಾನೆ ಸಂಭವಿಸಿದ ಕಾರು–ಬೈಕ್ ಭೀಕರ ಅಪಘಾತದಲ್ಲಿ ಬೈಕ್ ಸವಾರ ಕೃಷ್ಣಪ್ಪ ಗೌಡ ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಸೋಮವಾರ ಬೆಳಿಗ್ಗೆ ಸುಮಾರು 7.30 ಗಂಟೆಗೆ ಬೈಕ್ ಸವಾರ ಕೃಷ್ಣಪ್ಪ ಗೌಡ ಪೊಟ್ಲಡ್ಕ ಕಡೆಯಿಂದ ಕೊಕ್ಕಡ ಕಡೆಗೆ ತೆರಳುತ್ತಿದ್ದ ವೇಳೆ ಕೊಕ್ಕಡ ಕಡೆಯಿಂದ ಪೊಟ್ಲಡ್ಕ ಕಡೆಗೆ ಮೋಹನ್ ಕುಮಾರ್ ಟಿ.ಎಸ್. ಅವರು ಕಾರನ್ನು ತೀರಾ ಬಲಬದಿಗೆ ವಾಹನ ಚಲಾಯಿಸಿಕೊಂಡು ಬಂದ ಕಾರಣ ಬೈಕ್ ಸವಾರನಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಕೃಷ್ಣಪ್ಪ ಗೌಡ ರಸ್ತೆಗೆ ಬಿದ್ದು ಎಡಕಾಲಿನ ತೊಡೆ, ಎಡಕೈ, ಕೋಲುಕೈ ಹಾಗೂ ಎಡ ಪಾದಕ್ಕೆ ತೀವ್ರ ಸ್ವರೂಪದ ಗಾಯಗಳು ಸಂಭವಿಸಿವೆ.

ತಕ್ಷಣ ಸ್ಥಳೀಯರು ಗಾಯಾಳುವನ್ನು ಕೊಕ್ಕಡ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಹಿತಾ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿದೆ.

ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!