ನೆಲ್ಯಾಡಿ ಸಂತ ಜಾರ್ಜ್ ಪಿಯುಸಿ ಕೇಂದ್ರದಲ್ಲಿ ಪರೀಕ್ಷೆ ಆರಂಭ: 263 ಹಾಜರು, 7 ಗೈರು

ನೆಲ್ಯಾಡಿ ಸಂತ ಜಾರ್ಜ್ ಪಿಯುಸಿ ಕೇಂದ್ರದಲ್ಲಿ ಪರೀಕ್ಷೆ ಆರಂಭ: 263 ಹಾಜರು, 7 ಗೈರು

ನೆಲ್ಯಾಡಿ ಸಂತ ಜಾರ್ಜ್ ಪಿಯುಸಿ ಕೇಂದ್ರದಲ್ಲಿ ಪರೀಕ್ಷೆ ಆರಂಭ: 263 ಹಾಜರು, 7 ಗೈರು

ನೆಲ್ಯಾಡಿ ಸಂತ ಜಾರ್ಜ್ ಪಿಯುಸಿ ಕೇಂದ್ರದಲ್ಲಿ ಪರೀಕ್ಷೆ ಆರಂಭ: 263 ಹಾಜರು, 7 ಗೈರು

ನೆಲ್ಯಾಡಿ: ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುತ್ತಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಶನಿವಾರದಿಂದ ಆರಂಭಗೊಂಡಿದ್ದು, ಕಡಬ ತಾಲೂಕಿನ ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಸುತ್ತಮುತ್ತಲಿನ ಕಾಲೇಜುಗಳ ಒಟ್ಟು 314 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ.

ಶನಿವಾರ ನಡೆದ ಮೊದಲ ದಿನದ ಪರೀಕ್ಷೆಯಲ್ಲಿ ಒಟ್ಟು 270 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿತ್ತು ಈ ಪೈಕಿ 263 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 7 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ.

ಆರು ಕಾಲೇಜುಗಳ ವಿದ್ಯಾರ್ಥಿಗಳ ಭಾಗವಹಿಕೆ:
ಈ ಕೇಂದ್ರದಲ್ಲಿ ಕೊಕ್ಕಡ ಸರ್ಕಾರಿ ಪಿಯುಸಿ ಕಾಲೇಜು, ಅರಸಿನಮಕ್ಕಿ ಸರ್ಕಾರಿ ಪಿಯುಸಿ ಕಾಲೇಜು, ಕೋಣಾಲು ಸರ್ಕಾರಿ ಪಿಯುಸಿ ಕಾಲೇಜು, ನೆಲ್ಯಾಡಿ ಸಂತ ಜಾರ್ಜ್ ಪಿಯುಸಿ ಕಾಲೇಜು, ನೆಲ್ಯಾಡಿ ಬೆಥನಿ ಪಿಯುಸಿ ಕಾಲೇಜು ಹಾಗೂ ಕೊಕ್ಕಡ ಸೈಂಟ್ ಫ್ರಾನ್ಸಿಸ್ ಕಾಲೇಜು—ಇವು ಸೇರಿದಂತೆ ಆರು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

11 ಕೊಠಡಿಗಳು, 13 ಮೇಲ್ವಿಚಾರಕರು:
ಪರೀಕ್ಷೆ ಸುಗಮವಾಗಿ ನಡೆಯುವಂತೆ ಒಟ್ಟು 11 ಪರೀಕ್ಷಾ ಕೊಠಡಿಗಳನ್ನು ಸಿದ್ಧಪಡಿಸಲಾಗಿದ್ದು, ವಿವಿಧ ಕಾಲೇಜುಗಳಿಂದ ಬಂದ 13 ಮಂದಿ ಉಪನ್ಯಾಸಕರು ಕೊಠಡಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾಲೇಜಿನ ಪ್ರಾಚಾರ್ಯ ಏಲಿಯಾಸ್ ಎಂ.ಕೆ. ಅವರು ಮುಖ್ಯಅಧೀಕ್ಷಕರಾಗಿ ಹಾಗೂ ಬೆಟ್ಟಂಪಾಡಿ ಸರಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ರಶ್ಮಿ ಅವರು ಸಹ ಮುಖ್ಯಅಧೀಕ್ಷಕರಾಗಿ ನಿಯೋಜನೆಗೊಂಡಿದ್ದಾರೆ.

ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿದ್ದೇವೆ ಹಾಗೂ ವಿದ್ಯಾರ್ಥಿಗಳು ಭಯವಿಲ್ಲದೆ ಪರೀಕ್ಷೆ ಬರೆಯಲು ಅಗತ್ಯ ಸೌಲಭ್ಯ, ಮಾರ್ಗಸೂಚಿ ಫಲಕಗಳು, ಕುಡಿಯುವ ನೀರು ಹಾಗೂ ಶಾಂತ ವಾತಾವರಣವನ್ನು ಕಲ್ಪಿಸಿಕೊಟ್ಟಿದ್ದೇವೆ. ಅಗತ್ಯ ಸಹಾಯಕ್ಕಾಗಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
-ಅಬ್ರಹಾಂ ವರ್ಗೀಸ್, ಕಾರ್ಯದರ್ಶಿ ಸಂತ ಜಾರ್ಜ್ ವಿದ್ಯಾ ಸಂಸ್ಥೆ, ನೆಲ್ಯಾಡಿ

ಇಲಾಖೆಯವರ ಮಾರ್ಗಸೂಚಿಗಳಂತೆ ಪರೀಕ್ಷಾ ಕೇಂದ್ರದಲ್ಲಿ ಶಿಸ್ತು, ಭದ್ರತೆ ಮತ್ತು ವಿದ್ಯಾರ್ಥಿ ಸ್ನೇಹಿ ವಾತಾವರಣಕ್ಕೆ ಆದ್ಯತೆ ನೀಡಿದ್ದೇವೆ. ಪರೀಕ್ಷೆ ಸುಗಮವಾಗಿ ನಡೆಯಲು ಬೇಕಾದ ಎಲ್ಲ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದೇವೆ.
-ಏಲಿಯಾಸ್ ಎಂ.ಕೆ., ಪರೀಕ್ಷಾ ಮುಖ್ಯ ಅಧೀಕ್ಷಕರು ಹಾಗೂ ಪ್ರಾಚಾರ್ಯರು ಸಂತ ಜಾರ್ಜ್ ವಿದ್ಯಾ ಸಂಸ್ಥೆ, ನೆಲ್ಯಾಡಿ

Leave a Reply

You May Have Missed

error: Content is protected !!