ನೆಲ್ಯಾಡಿ: ಕರಾವಳಿ ಫಿಶ್ ಮಾಲಕ , ಸಮಾಜಸೇವಕ ಅಬ್ದುಲ್ ರಜಾಕ್ ನಿಧನ

ನೆಲ್ಯಾಡಿಯ ಕರಾವಳಿ ಫಿಶ್ ಮಾಲಕ, ಸಮಾಜಸೇವಕ ಅಬ್ದುಲ್ ರಜಾಕ್ ನಿಧನ

ನೆಲ್ಯಾಡಿ: ಕರಾವಳಿ ಫಿಶ್ ಮಾಲಕ , ಸಮಾಜಸೇವಕ ಅಬ್ದುಲ್ ರಜಾಕ್ ನಿಧನ

ನೆಲ್ಯಾಡಿಯ ಕರಾವಳಿ ಫಿಶ್ ಮಾಲಕ, ಸಮಾಜಸೇವಕ ಅಬ್ದುಲ್ ರಜಾಕ್ ನಿಧನ

ನೆಲ್ಯಾಡಿ: ನೆಲ್ಯಾಡಿಯಲ್ಲಿ ಕರಾವಳಿ ಫಿಶ್ ಹೆಸರಿನಲ್ಲಿ ದೀರ್ಘಕಾಲ ಮೀನಿನ ವ್ಯಾಪಾರ ನಡೆಸಿ ವ್ಯಾಪಾರ ಕ್ಷೇತ್ರದಲ್ಲಷ್ಟೇ ಅಲ್ಲದೆ ಸಮಾಜಸೇವೆಯಲ್ಲಿಯೂ ಗುರುತಿಸಿಕೊಂಡಿದ್ದ ಉದ್ಯಮಿ ಅಬ್ದುಲ್ ರಜಾಕ್(63) ಅವರು ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ರಜಾಕ್ ಅವರು ನೆಲ್ಯಾಡಿ ಜುಮ್ಮಾ ಮಸೀದಿ, ಅರಸಿನಮಕ್ಕಿ ಜುಮ್ಮಾ ಮಸೀದಿ, ನೆಲ್ಯಾಡಿ ಶೇರಿಯತ್ ಕಾಲೇಜುಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಮಾಜಮುಖಿ ಕಾರ್ಯಗಳಲ್ಲಿ ಸದಾ ಮುಂದಿದ್ದ ಅವರು ನೆರವಿನ ಅಗತ್ಯವಿದ್ದವರಿಗೆ ತಕ್ಷಣ ನೆರಳಾದ ಸರಳ-ಸಹಜ ಸ್ವಭಾವದ ಕೊಡುಗೈದಾನಿಯಾಗಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಸಹೋದರ–ಸಹೋದರಿಯರನ್ನು ಅಗಲಿದ್ದಾರೆ.

Leave a Reply

You May Have Missed

error: Content is protected !!