ಅವಕಾಶಗಳ ಸದುಪಯೋಗದಿಂದ ಜೀವನದ ಯಶಸ್ಸು ನಮ್ಮದಾಗಬೇಕು – ವಿಶ್ವನಾಥ ಪಿ ರೈ

ಅವಕಾಶಗಳ ಸದುಪಯೋಗದಿಂದ ಜೀವನದ ಯಶಸ್ಸು ನಮ್ಮದಾಗಬೇಕು – ವಿಶ್ವನಾಥ ಪಿ ರೈ

ನೇಸರ ಮಾ.20: ಅವಕಾಶಗಳ ಸದುಪಯೋಗದಿಂದ ಜೀವನದ ಯಶಸ್ಸು ನಮ್ಮದಾಗಬೇಕು ಎಂದು ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ ನೆಲ್ಯಾಡಿ ಇವರು ಶನಿವಾರ ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜಿನ ಸಿಲ್ವರ್ ಜೂಬಿಲಿ ಸಭಾಂಗಣದಲ್ಲಿ ನಡೆಸಿದ ಆನ್ಲೈನ್ ಜಾನಪದ ಗೀತ ಗಾಯನ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕೊಕ್ಕಡ ಸರಕಾರಿ ಪಿ.ಯು.ಕಾಲೇಜಿನ ಉಪನ್ಯಾಸಕರಾದ ವಿಶ್ವನಾಥ ಪಿ ರೈ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಅವರು ಆನ್ಲೈನ್ ಜಾನಪದ ಗೀತ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ ಹಾಗೂ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ನಿರ್ಧೇಶಕರಾದ ರೆ|ಫಾ| ಸತ್ಯನ್ ತೋಮಸ್ ಒ.ಐ.ಸಿ,ಯವರು ವಿದ್ಯಾರ್ಥಿಗಳು ಜೀವನದ ಕಷ್ಟಗಳನ್ನು ಎದುರಿಸಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.

ವೀಕ್ಷಿಸಿ Subscribers ಮಾಡಿ

ವೇದಿಕೆಯಲ್ಲಿ ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರೆ|ಫಾ|ತೋಮಸ್ ಬಿಜಿಲಿ ಒ.ಐ.ಸಿ, ಸಂಸ್ಥೆಯ ಪ್ರಾಂಶುಪಾಲರಾದ ಸಜಿ.ಕೆ.ತೋಮಸ್, ತರಬೇತಿ ಅಧಿಕಾರಿ ಜೋನ್ ಪಿ.ಎಸ್. ಉಪಸ್ಥಿತರಿದ್ದು ಶುಭ ಹಾರೈಸಿದರು. ಕಿರಿಯ ತರಬೇತಿ ಅಧಿಕಾರಿ ಸುಬ್ರಾಯ ನಾಯಕ್ ಸ್ವಾಗತಿಸಿ, ತರಬೇತಿ ಅಧಿಕಾರಿ ಜೋನ್ ಪಿ.ಎಸ್. ವಂದಿಸಿದರು. ಕಿರಿಯ ತರಬೇತಿ ಅಧಿಕಾರಿ ಹರಿಪ್ರಸಾದ್ ರೈ ಬಿ ಕಾರ್ಯಕ್ರಮ ನಿರೂಪಿಸಿದರು.
ಆನ್ಲೈನ್ ಜಾನಪದ ಗೀತ ಗಾಯನ ಸ್ಪರ್ಧೆಯಲ್ಲಿ ಜ್ಞಾನೋದಯ ಬೆಥನಿ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಥಮ ಹಾಗೂ ಬಿಷಪ್ ಪೋಳಿಕಾರ್ಪಸ್ ಪಬ್ಳಿಕ್ ಸ್ಕೂಲ್ ಉದನೆ ದ್ವಿತೀಯ ಸ್ಥಾನ ಪಡೆದುಕೊಂಡು ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ತಮ್ಮದಾಗಿಸಿಕೊಂಡರು. ಸ್ಪರ್ಧೆಯಲ್ಲಿ ಒಟ್ಟು 13 ಶಾಲೆಗಳು ಭಾಗವಹಿಸಿದ್ದು. ಭಾಗವಹಿಸಿರುವ ಎಲ್ಲಾ ತಂಡಗಳಿಗೆ ಪ್ರಮಾಣಪತ್ರ ನೀಡಲಾಯಿತು.

—ಜಾಹೀರಾತು—

Previous post

ಕೆ ಎಸ್.ಆರ್.ಟಿ ಸಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ,ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

Next post

ಇಚಿಲಂಪಾಡಿ ಶಾಲಾ ಆಟದ ಮೈದಾನಕ್ಕೆ ಕಾದಿರಿಸಿದ ಜಾಗ ಒತ್ತುವರಿ, ನೀತಿ ತಂಡದ ಮನವಿ ಮೇರೆಗೆ ಗಡಿಭಾಗ ಗುರುತು.

Leave a Reply

You May Have Missed

error: Content is protected !!