ದಾಂಪತ್ಯ ಕಲಹ : ಪತ್ನಿಯ ಹತ್ಯೆ, ಗಂಡ ಆತ್ಮಹತ್ಯೆಗೆ ಯತ್ನ

ದಾಂಪತ್ಯ ಕಲಹ : ಪತ್ನಿಯ ಹತ್ಯೆ, ಗಂಡ ಆತ್ಮಹತ್ಯೆಗೆ ಯತ್ನ

ದಾಂಪತ್ಯ ಕಲಹ : ಪತ್ನಿಯ ಹತ್ಯೆ, ಗಂಡ ಆತ್ಮಹತ್ಯೆಗೆ ಯತ್ನ

ಪುತ್ತೂರು: ಗಂಡ ಹೆಂಡತಿ ಜಗಳದ ಮಧ್ಯೆ ಹೆಂಡತಿ ಕೊಲೆಯಾದ ಘಟನೆ ಅರಿಯಡ್ಕ ಗ್ರಾಮದ ಕಟ್ಟತ್ತಾರು ಸಮೀಪದ ಗೋಳ್ತಿಲದಲ್ಲಿ ದಾರುಣ ಘಟನೆ ಮಾ.20ರಂದು ಬೆಳಿಗ್ಗೆ ನಡೆದಿದೆ.ಕೊಲೆ ನಡೆಸಿದ ಗಂಡನೂ ಆ ಬಳಿಕ ತನ್ನ ಕತ್ತನ್ನು ತಾನೇ ಕತ್ತಿಯಲ್ಲಿ ಕೊಯ್ದುಕೊಂಡಿದ್ದು ಆತನ ಸ್ಥಿತಿ ಗಂಭೀರವಾಗಿದೆ. ಆತನನ್ನು ಚಿಕಿತ್ಸೆಗಾಗಿ ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲೆಯಾದ ಮಹಿಳೆ ಮೂಲತಃ ಕುಮಾರಮಂಗಲದ ಸಾವಿತ್ರಿ(42.ವ) ಎಂದು ತಿಳಿದುಬಂದಿದೆ. ಇನ್ನು ಕೊಲೆ ನಡೆಸಿದ ಗಂಡ ಎಮೆಟ್ಟಿ ನಿವಾಸಿ ಪುರುಷೋತ್ತಮ ಯಾನೆ ಬೈರಪ್ಪ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Leave a Reply

You May Have Missed

error: Content is protected !!