ನೆಲ್ಯಾಡಿ: ಮಲಯಾಳಿ ವಿಶ್ವಕರ್ಮ ಸೇವಾ ಟ್ರಸ್ಟ್ ಪದಾಧಿಕಾರಿಗಳ ಆಯ್ಕೆ

ನೆಲ್ಯಾಡಿ ಮಲಯಾಳಿ ವಿಶ್ವಕರ್ಮ ಸೇವಾ ಟ್ರಸ್ಟ್

ನೆಲ್ಯಾಡಿ: ಮಲಯಾಳಿ ವಿಶ್ವಕರ್ಮ ಸೇವಾ ಟ್ರಸ್ಟ್ ಪದಾಧಿಕಾರಿಗಳ ಆಯ್ಕೆ

 

ನೆಲ್ಯಾಡಿ ಮಲಯಾಳಿ ವಿಶ್ವಕರ್ಮ ಸೇವಾ ಟ್ರಸ್ಟ್

ನೆಲ್ಯಾಡಿ: ಮಲಯಾಳಿ ವಿಶ್ವಕರ್ಮ ಸೇವಾ ಟ್ರಸ್ಟ್ ನೆಲ್ಯಾಡಿ ಇದರ ನೂತನ ಅಧ್ಯಕ್ಷರಾಗಿ ಮಧುಸೂದನ್ ಸಿ.ಬಿ.ನೆಕ್ಕರೆ, ಉಪಾಧ್ಯಕ್ಷರಾಗಿ ಶಶಿ ಕೆ.ಎಂಜಿರ, ಕಾರ್ಯದರ್ಶಿಯಾಗಿ ಶ್ರೀಜಾಕುಮಾರಿ ಪಟ್ಣ, ಜೊತೆ ಕಾರ್ಯದರ್ಶಿಯಾಗಿ ಶೀಬಾ ಪಿ.ಕೆ.ಪಟ್ಣ, ಕೋಶಾಧಿಕಾರಿಯಾಗಿ ಸುಧೀಶ್ ಕಡಬ ಆಯ್ಕೆಯಾಗಿದ್ದಾರೆ.

ಎಂಜಿರ ವಿಶ್ವಕರ್ಮ ಕಾಂಪ್ಲೆಕ್ಸ್‌ನಲ್ಲಿ ಮಾ.28ರಂದು ನಡೆದ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸದಸ್ಯರಾಗಿ ಸದಾಶಿವನ್ ಟಿ.ಟಿ.ನೆಕ್ಕರೆ, ದಿನೇಶ್ ನೆಕ್ಕರೆ, ಪ್ರಸನ್ನನ್ ಮಾಣಿಗೇರಿ, ಉಮೇಶ್ ನೆಕ್ಕರೆ, ಸುಶೀಲ ಕೊಕ್ಕಡ, ಸಿಂಧು ನೆಕ್ಕರೆ, ರಜನಿ ನೆಕ್ಕರೆ, ರವಿ ಪಿಜಕ್ಕಳ, ಲತಾ ಶಿಬಾಜೆ ಆಯ್ಕೆಯಾಗಿದ್ದಾರೆ.

ಮಲಯಾಳಿ ವಿಶ್ವಕರ್ಮ ಸೇವಾ ಟ್ರಸ್ಟ್‌ನ ನಿರ್ಗಮನ ಅಧ್ಯಕ್ಷ ಸಜಿ ನೆಲ್ಯಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನಾಗರಿಕರಾದ ಓಮನ ತಿರುವಳ್ಳೂರ್ ಉದ್ಘಾಟಿಸಿದರು. ಶ್ರೀ ಈಶ್ವರ ಕಾಳಿಕಾಂಬ ದೇವಸ್ಥಾನದ ಮಾಜಿ ಅಧ್ಯಕ್ಷ ಮಧುಸೂದನ್, ನೂತನ ಅಧ್ಯಕ್ಷ ಪಿ.ವಿ.ಗಿರೀಶ್ ನೆಕ್ಕರೆ, ಕಾರ್ಯದರ್ಶಿ ಶ್ರೀಜಾಕುಮಾರಿ, ಜೊತೆ ಕಾರ್ಯದರ್ಶಿ ವಿನೋದ್ ಮರ್ದಾಳ, ಕೋಶಾಧಿಕಾರಿ ಉಮೇಶ್ ನೆಕ್ಕರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀ ಈಶ್ವರ ಕಾಳಿಕಾಂಬ ದೇವಸ್ಥಾನದ ಮಹಿಳೆಯರಿಂದ ತಿರುವಾದಿರ ಹಾಗೂ ಡ್ಯಾನ್ಸ್ ಕಾರ್ಯಕ್ರಮ ನಡೆಯಿತು. ವಿನೋದ್ ಮರ್ದಾಳ, ರಾಜನ್ ಪಡ್ಡಡ್ಕ, ಮಧುಸೂದನ್ ಸಿ.ಬಿ.ಇವರು ಹಾಡುಗಳ ಮೂಲಕ ಮನರಂಜಿಸಿದರು. ಟಿ.ಟಿ.ಸದಾಶಿವನ್ ನಿರೂಪಿಸಿದರು. ವಿನೋದ್ ಮರ್ದಾಳ ಪ್ರಾರ್ಥಿಸಿದರು.

 

Leave a Reply

You May Have Missed

error: Content is protected !!