ಪುತ್ತೂರು–ಜಾವಗಲ್ ಕೆಎಸ್‌ಆರ್‌ಟಿಸಿ ಬಸ್ಸಿಗೆ ನೆಲ್ಯಾಡಿಯಲ್ಲಿ ಭವ್ಯ ಸ್ವಾಗತ

ಪುತ್ತೂರು–ಜಾವಗಲ್ ಕೆಎಸ್‌ಆರ್‌ಟಿಸಿ ಬಸ್ಸಿಗೆ ನೆಲ್ಯಾಡಿಯಲ್ಲಿ ಭವ್ಯ ಸ್ವಾಗತ

ಪುತ್ತೂರು–ಜಾವಗಲ್ ಕೆಎಸ್‌ಆರ್‌ಟಿಸಿ ಬಸ್ಸಿಗೆ ನೆಲ್ಯಾಡಿಯಲ್ಲಿ ಭವ್ಯ ಸ್ವಾಗತ

 

ಪುತ್ತೂರು–ಜಾವಗಲ್ ಕೆಎಸ್‌ಆರ್‌ಟಿಸಿ ಬಸ್ಸಿಗೆ ನೆಲ್ಯಾಡಿಯಲ್ಲಿ ಭವ್ಯ ಸ್ವಾಗತ

ನೆಲ್ಯಾಡಿ: ಪುತ್ತೂರಿನಿಂದ ಜಾವಗಲ್‌ಗೆ ಹೊಸದಾಗಿ ಪ್ರಾರಂಭಗೊಂಡ ಕೆಎಸ್‌ಆರ್‌ಟಿಸಿ ಬಸ್ ಸೇವೆಗೆ ಏ.1ರಂದು ಬೆಳಿಗ್ಗೆ ನೆಲ್ಯಾಡಿ ಬಸ್ ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಸ್ಥಳೀಯರು, ಸಾರ್ವಜನಿಕ ಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ ಬಸ್ ಸೇವೆಯನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಕೃಷ್ಣಪ್ಪ ರಾಮಕುಂಜ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸರ್ವೋತ್ತಮ ಗೌಡ, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಆದಂ ಕಾಜರೊಕ್ಕು, ನೆಲ್ಯಾಡಿ ಮಸೀದಿ ಅಧ್ಯಕ್ಷ ಇಸ್ಮಾಯಿಲ್, ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ಶುಕೂರ್ ಹಾಜಿ ಪುತ್ತೂರು, ಭೂ ನ್ಯಾಯ ಮಂಡಳಿ ಸದಸ್ಯ ಅಬ್ರಹಾಂ ಕೆ.ಪಿ., ಸ್ಥಳೀಯ ಪ್ರಮುಖರಾದ ಚಾಕೋ ಇಂಜಿನಿಯರ್, ಸಲಾಂ ಬಿಲಾಲ್ ಪಡುಬೆಟ್ಟು, ಹನೀಫ್ ಕರಾವಳಿ, ಅಬ್ದುಲ್ ಜಬ್ಬಾರ್, ಉಷಾ ಜೋಯಿ, ಸಜಿ ಬ್ರೈಟ್, ಕುಶಾಲಪ್ಪ, ಶಿವಪ್ರಕಾಶ್, ಎಂ.ಎಸ್. ಸುಲೈಮಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕೆಎಸ್‌ಆರ್‌ಟಿಸಿ ನಿವೃತ್ತ ಸಂಚಾರ ನಿಯಂತ್ರಕ ಅಬ್ಬಾಸ್ ಕೋಚಕಟ್ಟೆ ಸ್ವಾಗತಿಸಿ ಪುತ್ತೂರಿನಿಂದ ಬೇಲೂರು–ಹಳೇಬೀಡು ಮೂಲಕ ಜಾವಗಲ್‌ಗೆ ಬಸ್ ವ್ಯವಸ್ಥೆ ಮಾಡುವ ಬೇಡಿಕೆ ಬಹುಕಾಲದಿಂದಲೂ ಇದ್ದುದಾಗಿ ಹೇಳಿದರು. ಇದೀಗ ಶಾಸಕ ಅಶೋಕ್ ರೈ ಅವರ ಪ್ರಯತ್ನದಿಂದ ಈ ಬಸ್ ಸೇವೆ ಆರಂಭಗೊಂಡಿರುವುದು ಸಂತೋಷದ ವಿಷಯವಾಗಿದ್ದು, ಜನತೆ ಪರವಾಗಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಹೊಸ ಬಸ್ ಸೇವೆಯಿಂದ ಪುತ್ತೂರು–ಜಾವಗಲ್ ಮಾರ್ಗದ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಸ್ಥಳೀಯರು ಸಂತೋಷ ವ್ಯಕ್ತಪಡಿಸಿದ್ದಾರೆ.

 

Leave a Reply

You May Have Missed

error: Content is protected !!