ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಯವರ ಹುಟ್ಟುಹಬ್ಬದ ಪ್ರಯುಕ್ತ ಹಣ್ಣು ಹಂಪಲು ವಿತರಣೆ

ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಯವರ ಹುಟ್ಟುಹಬ್ಬದ ಪ್ರಯುಕ್ತ ಹಣ್ಣು ಹಂಪಲು ವಿತರಣೆ

ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಯವರ ಹುಟ್ಟುಹಬ್ಬದ ಪ್ರಯುಕ್ತ ಹಣ್ಣು ಹಂಪಲು ವಿತರಣೆ

 

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, (ರಿ) ಕಡಬ ತಾಲೂಕು ಇದರ ವಾತ್ಸಲ್ಯ ಕಾರ್ಯಕ್ರಮದಲ್ಲಿ ಪ್ರತಿ ತಿಂಗಳು ಮಾಶಾಸನ ಪಡೆಯುತ್ತಿರುವ 40 ಮಂದಿ ಸದಸ್ಯರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ಹಣ್ಣು ಹಂಪಲು ವಿತರಿಸಿ ಹುಟ್ಟು ಹಬ್ಬದ ಶುಭಾಶಯವನ್ನು ಕೋರಲಾಯಿತು.

ವಾತ್ಸಲ್ಯ ಕಾರ್ಯಕ್ರಮದಲ್ಲಿ ತೀರ ಅಸಹಾಯಕ ನಿರ್ಗತಿಕ ಸದಸ್ಯರಿಗೆ ಸಹಾಯಹಸ್ತ ನೀಡುವ ಕಾರ್ಯ ವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ಹಲವಾರು ವರ್ಷಗಳಿಂದ ನಡೆಸುತ್ತಾ ಬಂದಿದೆ. ರಾಜ್ಯದಲ್ಲಿ 80,500 ಮಂದಿ ಸದಸ್ಯರು ಇದರ ಫಲಾನುಭವಿಗಳಾಗಿರುತ್ತಾರೆ. ಅಲ್ಲದೆ ಸದಸ್ಯರಿಗೆ ಉಪಯೋಗಿಸಲು ಬೇಕಾದ ದಿನೋಪಯೋಗಿ ವಸ್ತುಗಳ ವಿತರಣೆ ಹಾಗೂ ವಾಸಿಸಲು ಸೂಕ್ತವಾದ ಮನೆಯಿಲ್ಲದದವರಿಗೆ ವಾತ್ಸಲ್ಯ ಮನೆ ರಚನೆ ಮಾಡಿ ಕೊಡುತ್ತಿರುವುದು ಮಾತೃಶ್ರೀ ಅಮ್ಮನವರಿಗೆ ತೀರ ಅಸಹಾಯಕರ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ..

ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನ ಹಾಗೂ ಮೇಲ್ವಿಚಾರಕ ರವಿಪ್ರಸಾದ್,ಆನಂದ, ಸುಜಾತ, ಜಯಶ್ರೀ ಶೀಲಾವತಿ, ವೀಣಾ. ತಾಲೂಕಿನ ಸೇವಾ ಪ್ರತಿನಿಧಿಗಳು ಹಾಗೂ ಒಕ್ಕೂಟದ ಅಧ್ಯಕ್ಷರುಗಳಾದ ಬಾಲಕೃಷ್ಣ ಕೌಕ್ರಾಡಿ, ಸಬಾಸ್ಟಿನ್ ಮಾದೇರಿ, ಧರ್ಮಪಾಲಗೌಡ ಕೊಂಬಾರು, ಸತೀಶ್ಚಂದ್ರ ರೈ ಬಂಟ್ರ, ಬಾಲಕೃಷ್ಣ ಗೋಳಿತೊಟ್ಟು, ನಿತಿನ್ ಕೊಣಾಲು, ವೀರಪ್ಪ, ಸದಾನಂದ ಆಚಾರ್ಯ ರಾಮಕುಂಜ, ನೀಲಯ್ಯ ಗೌಡ ಕುಂತೂರು, ಸೀನಪ್ಪ ಕುಂಬಾರ ಶರವೂರು, ಅಮಿತಾ ಇಚ್ಲಂಪಾಡಿ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಫಲಾನುಭವಿಗಳಿಗೆ ಹಣ್ಣು ಹಂಪಲು ವಿತರಣೆಯನ್ನು ಮಾಡಲಾಯಿತು.

 

Leave a Reply

You May Have Missed

error: Content is protected !!