ನೆಲ್ಯಾಡಿ ಬಾಲಾಜಿ ಮೆಡಿಕಲ್ಸ್‌ನ ಉದಯಕುಮಾರ್‌ರವರ ಪುತ್ರ ಶ್ರೀವತ್ಸಗೆ ವಾಣಿಜ್ಯ ವಿಭಾಗದಲ್ಲಿ 3ನೇ ರ್‍ಯಾಂಕ್

ನೆಲ್ಯಾಡಿ ಬಾಲಾಜಿ ಮೆಡಿಕಲ್ಸ್‌ನ ಉದಯಕುಮಾರ್‌ರವರ ಪುತ್ರ ಶ್ರೀವತ್ಸಗೆ ವಾಣಿಜ್ಯ ವಿಭಾಗದಲ್ಲಿ 3ನೇ ರ್‍ಯಾಂಕ್

ನೆಲ್ಯಾಡಿ ಬಾಲಾಜಿ ಮೆಡಿಕಲ್ಸ್‌ನ ಉದಯಕುಮಾರ್‌ರವರ ಪುತ್ರ ಶ್ರೀವತ್ಸಗೆ ವಾಣಿಜ್ಯ ವಿಭಾಗದಲ್ಲಿ 3ನೇ ರ್‍ಯಾಂಕ್

ನೆಲ್ಯಾಡಿ: ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತಿಯ ಪಿಯುಸಿ ಪಬ್ಲಿಕ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜಿನ ವಿದ್ಯಾರ್ಥಿ, ನೆಲ್ಯಾಡಿ ಬಾಲಾಜಿ ಮೆಡಿಕಲ್ಸ್‌ನ ಮಾಲಕ ಉದಯಕುಮಾರ್‌ರವರ ಪುತ್ರ ಶ್ರೀವತ್ಸಗೆ ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ 3ನೇ ರ್‍ಯಾಂಕ್ ಲಭಿಸಿದೆ.

ಇವರಿಗೆ 600ರಲ್ಲಿ 597 ಅಂಕ ಲಭಿಸಿದೆ. ಇಂಗ್ಲಿಷ್‌ನಲ್ಲಿ 98, ಸಂಸ್ಕೃತದಲ್ಲಿ 100, ಅರ್ಥಶಾಸ್ತ್ರದಲ್ಲಿ 99, ಬುಸಿನೆಸ್ ಸ್ಟಡೀಸ್‌ನಲ್ಲಿ 100, ಎಕೌಂಟೆನ್ಸಿಯಲ್ಲಿ 100 ಹಾಗೂ ಸ್ಟೇಟಿಸ್ಟಿಕ್ಸ್‌ನಲ್ಲಿ 100 ಅಂಕ ಪಡೆದುಕೊಂಡಿದ್ದಾರೆ. ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪ್ರೌಢಶಿಕ್ಷಣ ಪಡೆದುಕೊಂಡಿದ್ದ ಇವರು ಎಸ್‌ಎಸ್‌ಎಲ್‌ಸಿಯಲ್ಲಿ 625ರಲ್ಲಿ 600 ಅಂಕ ಪಡೆದುಕೊಂಡಿದ್ದರು.

ಇವರು ಧರ್ಮಸ್ಥಳ ಮುಂಡ್ರುಪ್ಪಾಡಿ ನಿವಾಸಿ, ನೆಲ್ಯಾಡಿ ಬಾಲಾಜಿ ಮೆಡಿಕಲ್ಸ್‌ನ ಮಾಲಕ ಉದಯಕುಮಾರ್ ಹಾಗೂ ಸುಮಿತ್ರಾ ದಂಪತಿ ಪುತ್ರ.

Leave a Reply

You May Have Missed

error: Content is protected !!