ಬೆಳ್ತಂಗಡಿ: ನಾಯಿ ಅಡ್ಡಬಂದು ಆಟೋ ಪಲ್ಟಿ – ಚಾಲಕ ದುರ್ಮರಣ

ಬೆಳ್ತಂಗಡಿ: ನಾಯಿ ಅಡ್ಡಬಂದು ಆಟೋ ಪಲ್ಟಿ – ಚಾಲಕ ದುರ್ಮರಣ

ಬೆಳ್ತಂಗಡಿ: ನಾಯಿ ಅಡ್ಡಬಂದು ಆಟೋ ಪಲ್ಟಿ – ಚಾಲಕ ದುರ್ಮರಣ

ಬೆಳ್ತಂಗಡಿ: ನಾಯಿ ಅಡ್ಡಬಂದು ಆಟೋ ಪಲ್ಟಿ – ಚಾಲಕ ದುರ್ಮರಣ

ಬೆಳ್ತಂಗಡಿ: ನಾಯಿ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿದ ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿದ ದುರ್ಘಟನೆ ಗುರುವಾರ ಬೆಳಿಗ್ಗೆ ಅಳದಂಗಡಿಯಲ್ಲಿ ನಡೆದಿದೆ.

ಮೃತರನ್ನು ನಾವರ ಗ್ರಾಮದ ಹಾರಡ್ಡೆ ನಿವಾಸಿ, ಆಟೋ ಚಾಲಕ ದೇವಪ್ಪ (37) ಎಂದು ಗುರುತಿಸಲಾಗಿದೆ.

ಗುರುವಾಯನಕೆರೆ ಕಡೆಯಿಂದ ಅಳದಂಗಡಿ ಕಡೆ ಬಾಡಿಗೆ ಮಾಡಿ ವಾಪಸ್ ತೆರಳುತ್ತಿದ್ದ ವೇಳೆ, ಅಳದಂಗಡಿ ಸತ್ಯದೇವತೆ ದೇವಸ್ಥಾನದ ಸಮೀಪ ರಸ್ತೆಯಲ್ಲಿ ನಾಯಿ ಅಡ್ಡಬಂದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಉರುಳಿಬಿದ್ದಿದೆ.ಗಂಭೀರವಾಗಿ ಗಾಯಗೊಂಡಿದ್ದ ದೇವಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಈ ಕುರಿತು ವೇಣೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

You May Have Missed

error: Content is protected !!