ಡಿವೈಡರ್‌ ಗೆ ಡಿಕ್ಕಿಯಾದ ಬೈಕ್‌- ಸ್ಥಳದಲ್ಲೇ ಸವಾರ ಮೃತ್ಯು; ಇಬ್ಬರಿಗೆ ಗಾಯ

ಡಿವೈಡರ್‌ ಗೆ ಡಿಕ್ಕಿಯಾದ ಬೈಕ್‌- ಸ್ಥಳದಲ್ಲೇ ಸವಾರ ಮೃತ್ಯು; ಇಬ್ಬರಿಗೆ ಗಾಯ

ಡಿವೈಡರ್‌ ಗೆ ಡಿಕ್ಕಿಯಾದ ಬೈಕ್‌- ಸ್ಥಳದಲ್ಲೇ ಸವಾರ ಮೃತ್ಯು; ಇಬ್ಬರಿಗೆ ಗಾಯ

 

ಡಿವೈಡರ್‌ ಗೆ ಡಿಕ್ಕಿಯಾದ ಬೈಕ್‌- ಸ್ಥಳದಲ್ಲೇ ಸವಾರ ಮೃತ್ಯು; ಇಬ್ಬರಿಗೆ ಗಾಯ

ಪುತ್ತೂರು: ಎರಡು ಬೈಕ್‌ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಪುತ್ತೂರು- ಉಪ್ಪಿನಂಗಡಿ ರಸ್ತೆಯಲ್ಲಿನ ಪುತ್ತೂರು ನಗರದ ಪಡೀಲ್ ಎಂಬಲ್ಲಿ ನಡೆದಿದೆ.

ಬೆಳ್ಳಿಪ್ಪಾಡಿ ಕೊಡಿರದ ವಿಶ್ವನಾಥ ಪೂಜಾರಿ ಅವರ ಮಗ ಧನರಾಜ್(29.ವ) ಮೃತಪಟ್ಟ ವ್ಯಕ್ತಿ

ವ್ಯಕ್ತಿಯೋರ್ವ ಚಲಾಯಿಸುತ್ತಿದ್ದ ಬೈಕ್‌ ಪುತ್ತೂರಿನಿಂದ ಉಪ್ಪಿನಂಗಡಿ ಕಡೆಗೆ, ಮತ್ತೊಂದು ಸಹಸವಾರ ಸೇರಿದಂತೆ ಇಬ್ಬರಿದ್ದ ಬೈಕ್ ಉಪ್ಪಿನಂಗಡಿಯಿಂದ ಪುತ್ತೂರಿಗೆ ಬರುತ್ತಿದ್ದ ವೇಳೆ, ಉಪ್ಪಿನಂಗಡಿಗೆ ತೆರಳುತ್ತಿದ್ದ ಬೈಕ್‌ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಡಿವೈಡರ್‌ ಗೆ ಡಿಕ್ಕಿ ಹೊಡೆದು ಇನ್ನೊಂದು ಭಾಗದಲ್ಲಿ ಪುತ್ತೂರಿನ ಕಡೆಗೆ ಸಾಗುತ್ತಿದ್ದ ಬೈಕ್‌ ಗೆ ಡಿಕ್ಕಿಯಾಗಿ ಪಕ್ಕದಲ್ಲಿದ್ದ ವಿದ್ಯುತ್‌ ಕಂಬಕ್ಕೆ ಬಡಿದ ಪರಿಣಾಮ ಬೈಕ್ ಸವಾರನ ತಲೆಗೆ ತೀವ್ರತರವಾದ ಗಾಯವಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇನ್ನೊಂದು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಗಾಯಗಳಾಗಿದ್ದು, ತಕ್ಷಣ ಅವರನ್ನು ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.

 

Previous post

ಅಕ್ಷಯ ತೃತೀಯ ಸಂಭ್ರಮಕ್ಕೆ ನೆಲ್ಯಾಡಿಯಲ್ಲಿ ‘ಸ್ಟಡ್ ಫೆಸ್ಟ್’ – ಮುಳಿಯ ಸಿಲ್ವರಿಯದಲ್ಲಿ ಕಿವಿಯೋಲೆಗಳ ಮಹಾಮೇಳ

Next post

ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜನ್‌ಗೆ ನೂತನ ಅಧ್ಯಕ್ಷರಾಗಿ ಉಲ್ಲಾಹನ್.ಪಿ.ಎಂ ಆಯ್ಕೆ

Leave a Reply

You May Have Missed

error: Content is protected !!