ಪುತ್ತೂರು ಬಸ್ ನಿಲ್ದಾಣದ ಬಳಿ ವಿದ್ಯಾರ್ಥಿಗೆ ಗುಂಪು ಹಲ್ಲೆ – ಹಳೆಯ ವೈಷಮ್ಯ ಕಾರಣ ಎಂಬ ಶಂಕೆ

ಪುತ್ತೂರು ಬಸ್ ನಿಲ್ದಾಣದ ಬಳಿ ವಿದ್ಯಾರ್ಥಿಗೆ ಗುಂಪು ಹಲ್ಲೆ – ಹಳೆಯ ವೈಷಮ್ಯ ಕಾರಣ ಎಂಬ ಶಂಕೆ

ಪುತ್ತೂರು ಬಸ್ ನಿಲ್ದಾಣದ ಬಳಿ ವಿದ್ಯಾರ್ಥಿಗೆ ಗುಂಪು ಹಲ್ಲೆ – ಹಳೆಯ ವೈಷಮ್ಯ ಕಾರಣ ಎಂಬ ಶಂಕೆ

 

ಪುತ್ತೂರು ಬಸ್ ನಿಲ್ದಾಣದ ಬಳಿ ವಿದ್ಯಾರ್ಥಿಗೆ ಗುಂಪು ಹಲ್ಲೆ – ಹಳೆಯ ವೈಷಮ್ಯ ಕಾರಣ ಎಂಬ ಶಂಕೆ

ಪುತ್ತೂರು: ನಗರದ ಕಸಬಾ ಗ್ರಾಮದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ವಿದ್ಯಾರ್ಥಿಯೊಬ್ಬನ ಮೇಲೆ ಗುಂಪು ಹಲ್ಲೆ ನಡೆಸಿದ ಘಟನೆ ಬುಧವಾರ ಸಂಜೆ ನಡೆದಿದೆ. ಬೆಳ್ತಂಗಡಿ ನಿವಾಸಿ ಆದಿಲ್ ಹುಸೈನ್ (21) ಎಂಬವರು ಹಲ್ಲೆಗೆ ಒಳಗಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಆದಿಲ್ ಹುಸೈನ್ ಅವರು ಪುತ್ತೂರಿನ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಏ.22ರಂದು ಸಂಜೆ ತನ್ನ ಸ್ನೇಹಿತರಾದ ಸುಹೇಲ್ ಹಾಗೂ ಅಝಾರ್ ಅವರೊಂದಿಗೆ ಬಸ್ ನಿಲ್ದಾಣದ ಬಳಿ ಚಹಾ ಕುಡಿಯುತ್ತಿದ್ದ ವೇಳೆ, ಪರಿಚಯದವರಾದ ಬಿ.ಕೆ. ಮೊಯಿನುದ್ದೀನ್, ಮೋಹದ್ ಹಾಗೂ ಇತರ ಐದು ಮಂದಿ ಸ್ಥಳಕ್ಕೆ ಆಗಮಿಸಿ ಏಕಾಏಕಿ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ ವೇಳೆ ಆದಿಲ್ ಹುಸೈನ್ ಜೊತೆಗಿದ್ದ ಸ್ನೇಹಿತರು ಹಲ್ಲೆಯ ಬಗ್ಗೆ ಪ್ರಶ್ನಿಸಿದಾಗ, ಆರೋಪಿಗಳು ಅವರಿಗೆ ಸಹ ಬೆದರಿಕೆ ಒಡ್ಡಿದ್ದಾರೆ. ಬಳಿಕ ಅಲ್ಲಿದ್ದ ಸಾರ್ವಜನಿಕರು ಮಧ್ಯಪ್ರವೇಶಿಸಿ ಗಲಾಟೆಯನ್ನು ಶಮನಗೊಳಿಸಲು ಮುಂದಾದರೂ, ಆರೋಪಿಗಳು ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಹಲ್ಲೆಯಿಂದ ಗಾಯಗೊಂಡ ಆದಿಲ್ ಹುಸೈನ್ ಅವರನ್ನು ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಈ ಘಟನೆಗೆ ಹಿನ್ನೆಲೆವಾಗಿ ಕೆಲವು ತಿಂಗಳ ಹಿಂದೆ ಆದಿಲ್ ಹುಸೈನ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಆರೋಪಿಗಳು ಹಲ್ಲೆ ನಡೆಸುತ್ತಿದ್ದ ವೇಳೆ ಆದಿಲ್ ಮಧ್ಯಪ್ರವೇಶಿಸಿ ಗಲಾಟೆಯನ್ನು ಬಿಡಿಸಿದ್ದರಿಂದ ವೈಷಮ್ಯ ಉಂಟಾಗಿ, ಅದೇ ಕಾರಣಕ್ಕೆ ಇದೀಗ ಪ್ರತೀಕಾರದ ಹಲ್ಲೆ ನಡೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ.49/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 189(2), 191(2), 191(3), 352, 115(2), 118(1), 351(2) ಹಾಗೂ 190 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.

 

Previous post

ನೆಲ್ಯಾಡಿ: ಪಟ್ಟೆದಮೂಲೆಯಲ್ಲಿ ದೈವಗಳ ನೇಮೋತ್ಸವ ಸಂಭ್ರಮ; ಹರಕೆಯ ಒತ್ತೆಕೋಲ -ಕಲ್ಲಪಣೆ ತರವಾಡಿನಿಂದ ಭಂಡಾರ ಆಗಮನ – ವೈಭವದ ಮೆರವಣಿಗೆ

Next post

ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಬೇಸಿಗೆ ಶಿಬಿರ

Leave a Reply

You May Have Missed

error: Content is protected !!