ಮೇ.1ರಿಂದ 7ರವರೆಗೆ ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್ ವಾರ್ಷಿಕ ಹಬ್ಬ






ನೆಲ್ಯಾಡಿ: ಸಂತ ಜೋರ್ಜರ ನಾಮದಲ್ಲಿ ಪ್ರಸಿದ್ಧಿ ಹೊಂದಿರುವ ಕರ್ನಾಟಕನ ಪ್ರಥಮ ಜೋರ್ಜಿಯನ್ ತೀರ್ಥಾಟನಾ ಕೇಂದ್ರವಾದ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಇಚ್ಲಂಪಾಡಿ ದೇವಾಲಯದ ವಾರ್ಷಿಕ ಹಬ್ಬವು ಮೇ.1 ರಿಂದ 7ರ ವರೆಗೆ ನಡೆಯಲಿದೆ.
ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲೀತ್ತಾ ಹಾಗೂ ತಿರುವನಂತಪುರಂ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ.ಗಬ್ರಿಯೇಲ್ ಮಾರ್ ಗ್ರಿಗೋರಿಯೋಸ್ ಮೆತ್ರಾಪ್ಪೋಲೀತ್ತಾ ಇವರ ಮಹನೀಯ ನೇತೃತ್ವದಲ್ಲಿ ಹಾಗೂ ಅನೇಕ ಧರ್ಮಗುರುಗಳ ಸಹಕಾರದೊಂದಿಗೆ ಅತೀ ವಿಜೃಂಭಣೆಯಿಂದ ನಡೆಯಲಿದೆ.
ಮೇ.1 ರಿಂದ 7 ರವರೆಗೆ ಪವಿತ್ರ ದಿವ್ಯಬಲಿ ಪೂಜೆಯ ನಂತರ ಹರಕೆ ಕಾಣಿಕೆಗಳನ್ನು ಸಲ್ಲಿಸಲು ಹಾಗೂ ಭಜನೆ ಕೂರಲು ಅವಕಾಶವಿರುವುದು.
ಮೇ.1ರಿಂದ 7ರವರೆಗೆ ಪವಿತ್ರ ದಿವ್ಯಪೂಜೆಗಳ ಸೇವೆಯನ್ನು ವಹಿಸಲು ಅವಕಾಶವಿರುತ್ತದೆ.
ಕೋಳಿ ಹರಕೆಯನ್ನು ಹಾಗೂ ಅಪ್ಪದ ಹರಕೆಯನ್ನು ನೀಡಲು ಬಯಸುವವರು ಮೇ.7ರಂದು ಬೆಳಗ್ಗೆ 9ಗಂಟೆಗೆ ಮುಂಚಿತವಾಗಿ ಅರ್ಪಿಸುವುದು ಅನುಕೂಲಕರವಾಗಿರುತ್ತದೆ.
ಮೇ.1ರಿಂದ 5ರವರೆಗೆ ಪವಿತ್ರ ದಿವ್ಯ ಬಲಿಪೂಜೆಯ ನಂತರ ಹಾಗೂ ಪ್ರತಿದಿನ ಸಂಧ್ಯಾ ಪ್ರಾರ್ಥನೆ ನಂತರ ಉರುಳುಸೇವೆಗೆ ಅವಕಾಶವಿರುವುದು ಹಾಗೂ ಮೇ.6 ಮತ್ತು 7ರ ಮೆರವಣಿಗೆಗೆ ಮೊದಲು ಅವಕಾಶವಿರುವುದು.
ಉರುಳುಸೇವೆ ಮಾಡುವವರು ಸಭ್ಯವಾದ ವಸ್ತ್ರಧಾರಣೆ ಮಾಡತಕ್ಕದ್ದು.
ಮೇ.7ರಂದು ಇಚ್ಲಂಪಾಡಿಯಿಂದ ನೆಲ್ಯಾಡಿ ಕಡಬ, ಧರ್ಮಸ್ಥಳ, ಉಪ್ಪಿನಂಗಡಿ ಕಡೆಗೆ ಬಸ್ ಸರ್ವಿಸ್ ಇರುತ್ತದೆ.


















Leave a Reply