ನೆಲ್ಯಾಡಿ ಸರ್ವಿಸ್ ಜೀಪ್ ಚಾಲಕ ಶೇಖರ ಗೌಡ ಹೃದಯಾಘಾತದಿಂದ ನಿಧನ

ನೆಲ್ಯಾಡಿ ಸರ್ವಿಸ್ ಜೀಪ್ ಚಾಲಕ ಶೇಖರ ಗೌಡ ಹೃದಯಾಘಾತದಿಂದ ನಿಧನ

ನೆಲ್ಯಾಡಿ ಸರ್ವಿಸ್ ಜೀಪ್ ಚಾಲಕ ಶೇಖರ ಗೌಡ ಹೃದಯಾಘಾತದಿಂದ ನಿಧನ

ನೆಲ್ಯಾಡಿ ಸರ್ವಿಸ್ ಜೀಪ್ ಚಾಲಕ ಶೇಖರ ಗೌಡ ಹೃದಯಾಘಾತದಿಂದ ನಿಧನ

ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಕುಂಡಡ್ಕ ನಿವಾಸಿ, ಸರ್ವಿಸ್ ಜೀಪ್ ಚಾಲಕರಾಗಿ ಪರಿಚಿತರಾಗಿದ್ದ ಶೇಖರ ಗೌಡ(56)ಅವರು ಇಂದು(ಮೇ.02) ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.

ಮುಂಜಾನೆ ಮನೆಯಲ್ಲಿದ್ದ ವೇಳೆ ಶೇಖರ ಗೌಡ ಅವರಿಗೆ ಏಕಾಏಕಿ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಹಲವಾರು ವರ್ಷಗಳಿಂದ ಗುಂಡ್ಯ, ಶಿರಾಡಿ, ನೆಲ್ಯಾಡಿ, ಉಪ್ಪಿನಂಗಡಿ ಭಾಗಗಳಲ್ಲಿ ಸ್ವಂತ ಸರ್ವಿಸ್ ಜೀಪ್‌ನ್ನು ನಡೆಸುತ್ತಾ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿದ್ದ ಅವರು, ಸರಳ ಸ್ವಭಾವ ಮತ್ತು ಸ್ನೇಹಪರ ವ್ಯಕ್ತಿತ್ವದಿಂದ ಜನಮನ ಗೆದ್ದಿದ್ದರು.

ಮೃತರು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Leave a Reply

You May Have Missed

error: Content is protected !!