ನೆಲ್ಯಾಡಿ: ಲೆಜೆಂಡ್ ಟ್ರೋಫಿ ಕ್ರಿಕೆಟ್ : ಪಿಲವೂರ್ ಸ್ಟಾರ್ ತಂಡ ಚಾಂಪಿಯನ್

ನೆಲ್ಯಾಡಿ: ಲೆಜೆಂಡ್ ಟ್ರೋಫಿ ಕ್ರಿಕೆಟ್ : ಪಿಲವೂರ್ ಸ್ಟಾರ್ ತಂಡ ಚಾಂಪಿಯನ್

ನೆಲ್ಯಾಡಿ: ಲೆಜೆಂಡ್ ಟ್ರೋಫಿ ಕ್ರಿಕೆಟ್ : ಪಿಲವೂರ್ ಸ್ಟಾರ್ ತಂಡ ಚಾಂಪಿಯನ್

 

ನೆಲ್ಯಾಡಿ: ಲೆಜೆಂಡ್ ಟ್ರೋಫಿ ಕ್ರಿಕೆಟ್ : ಪಿಲವೂರ್ ಸ್ಟಾರ್ ತಂಡ ಚಾಂಪಿಯನ್

ನೆಲ್ಯಾಡಿ:ಸಂಡೇ ಕ್ರಿಕೆಟರ್ಸ್ ಆಶ್ರಯದಲ್ಲಿ 40 ವರ್ಷ ಮೇಲ್ಪಟ್ಟ ಆಟಗಾರರಿಗಾಗಿ ಆಯೋಜಿಸಲಾಗಿದ್ದ “ಲೆಜೆಂಡ್ ಟ್ರೋಫಿ 2026” ಕ್ರಿಕೆಟ್ ಪಂದ್ಯಾಟವು ಮೇ 10ರಂದು ನೆಲ್ಯಾಡಿಯ ಗಾಂಧಿ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು. ಎಂಟು ತಂಡಗಳ ಭಾಗವಹಿಸುವಿಕೆಯಲ್ಲಿ ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾವಳಿಯು ಕ್ರೀಡಾಭಿಮಾನಿಗಳ ಗಮನ ಸೆಳೆಯಿತು.

ಪಂದ್ಯಾಟವನ್ನು ನಿವೃತ್ತ ಮುಖ್ಯಶಿಕ್ಷಕ ವೆಂಕಟ್ರಮಣ.ಆರ್ ಉದ್ಘಾಟಿಸಿ ಮಾತನಾಡಿ, ಕ್ರೀಡೆ ದೈಹಿಕ ಆರೋಗ್ಯದ ಜೊತೆಗೆ ಸ್ನೇಹ ಮತ್ತು ಸಹಭಾಗಿತ್ವವನ್ನು ಬೆಳೆಸುವ ವೇದಿಕೆಯಾಗಿದೆ ಎಂದು ಶುಭ ಹಾರೈಸಿದರು.

ದಿನವಿಡೀ ನಡೆದ ಪಂದ್ಯಗಳು ಜಿದ್ದಾಜಿದ್ದಿನಿಂದ ಕೂಡಿದ್ದು, ಅಂತಿಮ ಹಣಾಹಣಿಯಲ್ಲಿ ಆನಂದ ಮಾಲಕತ್ವದ ಪಿಲವೂರ್ ಸ್ಟಾರ್ ತಂಡ ಮತ್ತು ರಝಕ್ ಮಾಲಕತ್ವದ ಫ್ರೆಂಡ್ಸ್ ಗೊಳಿತೊಟ್ಟು ತಂಡ ಮುಖಾಮುಖಿಯಾದವು. ರೋಚಕ ಫೈನಲ್ ಪಂದ್ಯದಲ್ಲಿ ಪಿಲವೂರ್ ಸ್ಟಾರ್ ತಂಡ ಗೆಲುವು ಸಾಧಿಸಿ ಲೆಜೆಂಡ್ ಟ್ರೋಫಿ 2026ರ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.ಫ್ರೆಂಡ್ಸ್ ಗೊಳಿತೊಟ್ಟು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಇಸ್ಮಾಯಿಲ್ ನೆಲ್ಯಾಡಿ, ನೋಟರಿ ವಕೀಲರು ವಹಿಸಿದ್ದರು, ಸಂತ ಜಾರ್ಜ್ ಪ್ರೌಢಶಾಲಾ ಮುಖ್ಯಶಿಕ್ಷಕ ಎಂ.ಐ. ತೋಮಸ್ ಅತಿಥಿಯಾಗಿ ಭಾಗವಹಿಸಿ ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ಬಹುಮಾನ ವಿತರಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಎಲ್ಲಾ ತಂಡಗಳ ಮಾಲಕರು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು. ಅಪ್ಪಿ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

 

Leave a Reply

You May Have Missed

error: Content is protected !!