ಜೂನ್ 18ರಂದು ಕೊಕ್ಕಡದಲ್ಲಿ ‘ಕೇತ್ ಬಚಾವ್’ ಕಾರ್ಯಕ್ರಮ: ರೈತರಿಗೆ ಮಣ್ಣಿನ ಆರೋಗ್ಯ ಮತ್ತು ಆಧುನಿಕ ಕೃಷಿ ಕುರಿತು ಮಾಹಿತಿ

ಕೊಕ್ಕಡ: ರೈತ ಸಂಪರ್ಕ ಕೇಂದ್ರ, ಕೊಕ್ಕಡ ವತಿಯಿಂದ ರೈತರಲ್ಲಿ ಮಣ್ಣಿನ ಸಂರಕ್ಷಣೆ ಹಾಗೂ ಸುಸ್ಥಿರ ಕೃಷಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ‘ಕೇತ್ ಬಚಾವ್’ ಕಾರ್ಯಕ್ರಮವನ್ನು ನಾಳೆ (ಜೂನ್ 18) ಗುರುವಾರ ಬೆಳಿಗ್ಗೆ 10.30 ಗಂಟೆಗೆ ರೈತ ಸಂಪರ್ಕ ಕೇಂದ್ರ, ಕೊಕ್ಕಡದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಣ್ಣು ವಿಜ್ಞಾನಿ ಹಾಗೂ ಕೃಷಿ ಅಧಿಕಾರಿ ಭಾಗವಹಿಸಿ ರೈತರಿಗೆ ಮಣ್ಣಿನ ಆರೋಗ್ಯ ಕಾಪಾಡುವ ವಿಧಾನಗಳು, ಮಣ್ಣಿನ ಪರೀಕ್ಷೆಯ ಮಹತ್ವ, ಸಮತೋಲಿತ ಗೊಬ್ಬರ ಬಳಕೆ ಹಾಗೂ ಬೆಳೆ ಉತ್ಪಾದನೆ ಹೆಚ್ಚಿಸಲು ಅಗತ್ಯವಾದ ಕೃಷಿ ತಾಂತ್ರಿಕ ಮಾಹಿತಿಗಳ ಕುರಿತು ಉಪನ್ಯಾಸ ನೀಡಲಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಇತ್ತೀಚಿನ ತಂತ್ರಜ್ಞಾನಗಳು ಮತ್ತು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಂಡು ಉತ್ತಮ ಇಳುವರಿ ಪಡೆಯುವ ಕುರಿತು ರೈತರಿಗೆ ಮಾರ್ಗದರ್ಶನ ನೀಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸುವ ರೈತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ.

ಹೀಗಾಗಿ ಕೊಕ್ಕಡ ಹೋಬಳಿಯ ಎಲ್ಲಾ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ರೈತ ಸಂಪರ್ಕ ಕೇಂದ್ರ, ಕೊಕ್ಕಡ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

You May Have Missed

error: Content is protected !!