ನೆಲ್ಯಾಡಿ: ಪುಚ್ಚೇರಿ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ನೆಲ್ಯಾಡಿ: ಪುಚ್ಚೇರಿ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ನೆಲ್ಯಾಡಿ: ಪುಚ್ಚೇರಿ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

 

ನೆಲ್ಯಾಡಿ: ಪುಚ್ಚೇರಿ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ನೆಲ್ಯಾಡಿ: ಪುಚ್ಚೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸದಸ್ಯರು ಹಾಗೂ ಯೋಗ ಶಿಕ್ಷಕ ಪ್ರಥಮ್ ಕುಮಾರ್ ಸುರತ್ಕಲ್ ಅವರು ಭಾಗವಹಿಸಿ ಯೋಗದ ಮಹತ್ವ, ಆರೋಗ್ಯಕರ ಜೀವನದಲ್ಲಿ ಯೋಗದ ಪಾತ್ರ ಹಾಗೂ ನಿಯಮಿತ ಯೋಗಾಭ್ಯಾಸದ ಅಗತ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಬಳಿಕ ವಿವಿಧ ಯೋಗಾಸನಗಳು ಮತ್ತು ಪ್ರಾಣಾಯಾಮಗಳ ಪ್ರಾಯೋಗಿಕ ತರಬೇತಿಯನ್ನು ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಶಿಕ್ಷಕಿ ಗಿರಿಜಾ ಪಿ. ವಹಿಸಿ ಮಾತನಾಡಿದ ಅವರು ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಅತ್ಯುತ್ತಮ ಸಾಧನವಾಗಿದ್ದು, ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡಿದರು.

ಶಾಲೆಯ ಶಿಕ್ಷಕರಾದ ಪುರಂದರ ಗೌಡ ಡಿ., ಜಾಹ್ನವಿ, ಯೋಗೀಶ, ದಿನೇಶ್ ಹಾಗೂ ರೋಹಿಣಿ ಉಪಸ್ಥಿತರಿದ್ದರು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಯಶವಂತ ಟಿ. ಸದಸ್ಯರು ಮತ್ತು ಪೋಷಕರು ಹಾಜರಿದ್ದರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಯೋಗದ ಮಹತ್ವದ ಕುರಿತು ಅರಿವು ಮೂಡಿಸಿದರು.

ವಿದ್ಯಾರ್ಥಿಗಳು ಉತ್ಸಾಹದಿಂದ ಯೋಗಾಭ್ಯಾಸದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

 

Previous post

ಕೆರ್ಮಾಯಿ: ಪರಿಸರ ಜಾಗೃತಿ, ಗಿಡ ನೆಡುವಿಕೆ ಹಾಗೂ ವಿಶೇಷ ಸಂವಹನ ಕಾರ್ಯಕ್ರಮ

Next post

ಕಡಬ: ತಾಲೂಕಿನಲ್ಲಿ ಮೊದಲ ಅತಿಸೂಕ್ಷ್ಮ ರಂಧ್ರ ವಿಧಾನ ಭುಜದ ಸ್ಥಿರೀಕರಣ ಶಸ್ತ್ರಚಿಕಿತ್ಸೆ ಯಶಸ್ವಿ; ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ಮಹತ್ವದ ಸಾಧನೆ

Leave a Reply

You May Have Missed

error: Content is protected !!