ನೆಲ್ಯಾಡಿ: ಅಶ್ವಿನಿ ಆಸ್ಪತ್ರೆಯಲ್ಲಿ “ಅಶ್ವಿನಿ ಪಂಚಕರ್ಮ ಕೇಂದ್ರ” ಶುಭಾರಂಭ

ನೆಲ್ಯಾಡಿ: ಅಶ್ವಿನಿ ಆಸ್ಪತ್ರೆಯಲ್ಲಿ "ಅಶ್ವಿನಿ ಪಂಚಕರ್ಮ ಕೇಂದ್ರ" ಶುಭಾರಂಭ

ನೆಲ್ಯಾಡಿ: ಅಶ್ವಿನಿ ಆಸ್ಪತ್ರೆಯಲ್ಲಿ “ಅಶ್ವಿನಿ ಪಂಚಕರ್ಮ ಕೇಂದ್ರ” ಶುಭಾರಂಭ

 

ನೆಲ್ಯಾಡಿ: ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಗೊಂಡಿರುವ “ಅಶ್ವಿನಿ ಪಂಚಕರ್ಮ ಕೇಂದ್ರ” ಸೋಮವಾರದಂದು ಶುಭಾರಂಭಗೊಂಡಿತು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಮುರಳೀಧರ ವೈ.ಕೆ. ಅವರು ದೀಪ ಪ್ರಜ್ವಲಿಸುವ ಮೂಲಕ ಪಂಚಕರ್ಮ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ ಆಯುರ್ವೇದ ಚಿಕಿತ್ಸಾ ಪದ್ಧತಿಯ ಮಹತ್ವ ಹಾಗೂ ಪಂಚಕರ್ಮ ಚಿಕಿತ್ಸೆಯಿಂದ ದೊರೆಯುವ ಆರೋಗ್ಯ ಪ್ರಯೋಜನಗಳ ಕುರಿತು ವಿವರಿಸಿದರು. ಆಧುನಿಕ ವೈದ್ಯಕೀಯ ಸೇವೆಯೊಂದಿಗೆ ಆಯುರ್ವೇದ ಚಿಕಿತ್ಸೆಯನ್ನು ಸಮನ್ವಯಗೊಳಿಸುವ ಮೂಲಕ ಜನತೆಗೆ ಸಮಗ್ರ ಹಾಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವುದು ಆಸ್ಪತ್ರೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ.ಸುಧಾ ಅವರು ನೂತನ ಕೇಂದ್ರಕ್ಕೆ ಶುಭ ಹಾರೈಸಿದರು ಮಾತನಾಡಿದ ಅವರು ನೂತನ ಪಂಚಕರ್ಮ ಕೇಂದ್ರದಲ್ಲಿ ವಿವಿಧ ರೀತಿಯ ಆಯುರ್ವೇದ ಚಿಕಿತ್ಸೆಗಳು, ಪಂಚಕರ್ಮ ಚಿಕಿತ್ಸೆಗಳು ಹಾಗೂ ಆರೋಗ್ಯ ಪುನಶ್ಚೇತನ ಸೇವೆಗಳು ಲಭ್ಯವಿದ್ದು, ನೆಲ್ಯಾಡಿ ಹಾಗೂ ಸುತ್ತಮುತ್ತಲಿನ ಭಾಗದ ಜನತೆಗೆ ಗುಣಮಟ್ಟದ, ಪರಿಣಾಮಕಾರಿ ಆಯುರ್ವೇದ ಚಿಕಿತ್ಸೆಯನ್ನು ಒದಗಿಸುವ ಉದ್ದೇಶವನ್ನು ಆಸ್ಪತ್ರೆ ಹೊಂದಿದೆ. ಈ ಕೇಂದ್ರದ ಆರಂಭದಿಂದ ಈ ಭಾಗದ ಜನರು ಆಯುರ್ವೇದ ಚಿಕಿತ್ಸಾ ಸೇವೆಯನ್ನು ಸ್ಥಳೀಯವಾಗಿಯೇ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದರು.

ಡಾ.ಪ್ರಜ್ವಲ್ ಸ್ವಾಗತಿಸಿದರು. ಡಾ.ಪವಿತ್ರಾ ಬಿ.ಜೆ.ವಂದಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವರ್ಗ, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

 

Previous post

ಶಿರಾಡಿ: ಘಾಟ್‌ನಲ್ಲಿ ಟ್ಯಾಂಕರ್‌ಗೆ ಕಾರು ಡಿಕ್ಕಿ – ನಾಲ್ವರಿಗೆ ಗಾಯ; ಚಾಲಕನ ವಿರುದ್ಧ ಪ್ರಕರಣ ದಾಖಲು, ಟ್ರಾಫಿಕ್ ಜಾಮ್‌ನಿಂದ ಯಾತ್ರಿಕರ ಪರದಾಟ

Next post

ಕಳೆಂಜ: ಕ್ರಿಶ್ಚಿಯನ್ ಬ್ರದರ್ಸ್‌ನಿಂದ ಹೃದಯ ರೋಗಿಗೆ ₹50 ಸಾವಿರ ಧನಸಹಾಯ

Leave a Reply

You May Have Missed

error: Content is protected !!