ನೆಲ್ಯಾಡಿ: 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ

ನೆಲ್ಯಾಡಿ: 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ

ನೆಲ್ಯಾಡಿ: 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ

 

ನೆಲ್ಯಾಡಿ: 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ

ನೆಲ್ಯಾಡಿ: ನೆಲ್ಯಾಡಿ–ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರವಿಚಂದ್ರ ಹೊಸವಕ್ಲು ಅವರ ಅಧ್ಯಕ್ಷತೆಯಲ್ಲಿ 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ ಸಮಿತಿಯ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.

ಸಭೆಯಲ್ಲಿ 2026ನೇ ಸಾಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಪ್ರಹ್ಲಾದ್ ಶೆಟ್ಟಿ ಕೊಲ್ಯೊಟ್ಟು, ಉಪಾಧ್ಯಕ್ಷರಾಗಿ ಅಣ್ಣಿ ಎಲ್ತಿಮಾರ್ ಹಾಗೂ ಚಂದ್ರಶೇಖರ ಗೋಳಿತೊಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣಪ್ಪ ಕೆ.ನಿಡ್ಡೋಡಿ, ಜತೆ ಕಾರ್ಯದರ್ಶಿಯಾಗಿ ಗಿರೀಶ್ ಶೆಟ್ಟಿ ಬೀದಿ, ಕೋಶಾಧಿಕಾರಿಯಾಗಿ ದಯಾನಂದ ಕೆ. ಆದರ್ಶ ಆಯ್ಕೆಯಾದರು.

ಸಮಿತಿಯ ಸದಸ್ಯರಾಗಿ ರವಿಚಂದ್ರ ಹೊಸವಕ್ಲು, ರವಿ ಶೆಟ್ಟಿ ರಾಮನಗರ, ರಾಕೇಶ್ ಎಸ್. ಗೌಡ, ಸುಧೀರ್ ಕುಮಾರ್ ಕೆ.ಎಸ್., ರಕ್ಷಿತ್ ಮಡಿವಾಳ, ಉಮೇಶ್ ಪೂಜಾರಿ, ರವಿಚಂದ್ರ ಆತ್ರಿಜಾಲು, ರಘುನಾಥ್ ಪದ್ಮರ್ಪಿತಾ, ವಿನೋದ್ ಕುಮಾರ್ ಬಿ.ಜೆ., ರಮೇಶ್ ಬಾಣಾಜಾಲು, ಸುರೇಶ್ ಪಡಿಪಂಡ, ಮೋಹನ್ ಗೌಡ ಶಿಶಿಲ, ಮೋಹನ್ ಕಟ್ಟೆಮಜಲು, ಗಣೇಶ್ ಕೆ. ರಶ್ಮಿ,, ಗುಣಕರ, ಹರೀಶ್ ಕಟ್ಟೆಮಜಲು, ನವೀನ್ ಶ್ರೀ ಕಟೀಲ್, ಲೋಕೇಶ್ ಕೊಲ್ಯೊಟ್ಟು, ಕವನ್ ಹಾಗೂ ರಮೇಶ್ ಶೆಟ್ಟಿ ಬೀದಿ ಅವರನ್ನು ಆಯ್ಕೆ ಮಾಡಲಾಯಿತು.

ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

 

Leave a Reply

You May Have Missed

error: Content is protected !!