ನೆಲ್ಯಾಡಿ: ಕಾಮಧೇನು ಶ್ರೀ ವರಮಹಾಲಕ್ಷ್ಮಿ ಸೇವಾ ಸಮಿತಿ ರಚನೆ; ಆಮಂತ್ರಣ ಪತ್ರಿಕೆ ಬಿಡುಗಡೆ

ನೆಲ್ಯಾಡಿ: ಕಾಮಧೇನು ಶ್ರೀ ವರಮಹಾಲಕ್ಷ್ಮಿ ಸೇವಾ ಸಮಿತಿ ರಚನೆ; ಆಮಂತ್ರಣ ಪತ್ರಿಕೆ ಬಿಡುಗಡೆ

ನೆಲ್ಯಾಡಿ: ಕಾಮಧೇನು ಶ್ರೀ ವರಮಹಾಲಕ್ಷ್ಮಿ ಸೇವಾ ಸಮಿತಿ ರಚನೆ; ಆಮಂತ್ರಣ ಪತ್ರಿಕೆ ಬಿಡುಗಡೆ

 

ನೆಲ್ಯಾಡಿ: ಕಾಮಧೇನು ಶ್ರೀ ವರಮಹಾಲಕ್ಷ್ಮಿ ಸೇವಾ ಸಮಿತಿ ರಚನೆ; ಆಮಂತ್ರಣ ಪತ್ರಿಕೆ ಬಿಡುಗಡೆ

ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರಿ ಸಂಘ ಇದರ ಸಹಯೋಗದಲ್ಲಿ 2026–27ನೇ ಸಾಲಿನ ಎರಡನೇ ವರ್ಷದ ಕಾಮಧೇನು ಶ್ರೀ ವರಮಹಾಲಕ್ಷ್ಮಿ ಸೇವಾ ಸಮಿತಿಯನ್ನು ರಚಿಸಿ, ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಸಮಿತಿಯ ಅಧ್ಯಕ್ಷೆಯಾಗಿ ಉಷಾ ಅಂಚನ್, ಉಪಾಧ್ಯಕ್ಷೆಯಾಗಿ ಸಂಪಾವತಿ, ಕಾರ್ಯದರ್ಶಿಯಾಗಿ ದಿವ್ಯಾ, ಜೊತೆ ಕಾರ್ಯದರ್ಶಿಯಾಗಿ ವಾರಿಜಾಕ್ಷಿ, ಕೋಶಾಧಿಕಾರಿಯಾಗಿ ರಶ್ಮಿತಾ ಹಾಗೂ ಸಂಚಾಲಕರಾಗಿ ಚೈತನ್ಯ, ಸದಸ್ಯರಾಗಿ ರತಿ, ಪ್ರವೀಣಿ, ಮೈತ್ರಿ, ಮೇಘನಾ, ಶೈನ್, ಜಯಂತಿ, ಶಾಲಿನಿ, ಶ್ರೀಲತಾ, ಶ್ವೇತಾ, ಕುಸುಮಾವತಿ, ಆದರ್ಶ, ಸವಿತಾ, ಪ್ರಹ್ಲಾದ್ ಶೆಟ್ಟಿ, ಗಣೇಶ್ ಹಾಗೂ ಹೇಮಚಂದ್ರ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ನೆಲ್ಯಾಡಿ–ಕೌಕ್ರಾಡಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಹ್ಲಾದ್ ಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಕಾಮಧೇನು ಶ್ರೀ ವರಮಹಾಲಕ್ಷ್ಮಿ ಸೇವಾ ಸಮಿತಿ ಅಧ್ಯಕ್ಷೆ ಉಷಾ ಅಂಚನ್ ಸಮಸ್ತ ಜನರಿಗೆ ಶ್ರೀ ವರಮಹಾಲಕ್ಷ್ಮಿ ದೇವಿಯ ಅನುಗ್ರಹ ಲಭಿಸಲಿ ಎಂಬ ಉದ್ದೇಶದಿಂದ ಈ ಪೂಜೆಯನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗೌರವಾನ್ವಿತ ಸಮಿತಿಯ ಸದಸ್ಯರಾದ ಸವಿತಾ ಸರ್ವೋತ್ತಮ ಗೌಡ, ಹೇಮಾವತಿ ಸದಾನಂದ ಕುಂದರ್, ಗಾಯತ್ರಿ ಗಣೇಶ್ ನೆಲ್ಯಾಡಿ, ಭಾರತಿ ಹೊಸಮಜಲು, ಸಂಧ್ಯಾ ಸುಧೀರ್, ಅಶ್ವಿತಾ ಹೊಸಮಜಲು, ಶೈಲಾ ದೋಂತಿಲ, ಪ್ರಿಯಾಂಕ ರಜನೀಶ್ ಪುತ್ಯ, ನಮಿತಾ ಹೊಸಮಜಲು, ಕಲಾವತಿ ತೋಟ, ಪವಿತ್ರ ಮಹೇಶ್, ಅಶ್ವಿನಿ ಗೋಳಿತೊಟ್ಟು, ರಮ್ಯ ಗುರುಂಪು, ಶ್ವೇತಾ ಸಂತೋಷ ಕಲಾಯಿ, ಅನಿತಾ ಪ್ರಶಾಂತ್ ಐಐಸಿಟಿ, ಸುನಿತಾ ಟೈಲರ್, ಪ್ರಜನಿ ಕಡೆಂಬಿಲ, ಪೂರ್ಣಿಮಾ ಕಡೆಂಬಿಲ, ರಂಜಿತಾ ಕೊಲ್ಯುಟ್ಟು, ಸುಜಾತ ಮಾದೇರಿ, ರಕ್ಷಿತಾ ಕೊಲ್ಯೊಟ್ಟು, ವಿಜಯಾ ಕೊಲ್ಯೊಟ್ಟು, ಸವಿತಾ ಕಲಾಯಿ, ಅನಿತಾ ಕಲಾಯಿ, ಹೇಮಲತಾ ಹೊಸಮಜಲು, ನಿತ್ಯಾ ಕೊಕ್ಕಡ, ಆಶಾ ಸೋನಿತ್ ಹೊಸಮಜಲು, ಯಶೋಧ ಆಶಾ ಕಾರ್ಯಕರ್ತೆ ಕೊಕ್ಕಡ, ಪರಮೇಶ್ವರಿ ಶಿವಾರು ಹಾಗೂ ವೇದಾವತಿ ಜನಾರ್ದನ ಬಾಣಜಾಲು ಸೇರಿದಂತೆ ಸಮಿತಿಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

 

Leave a Reply

You May Have Missed

error: Content is protected !!