ಅಲಂಕಾರು: ಡಿಜಿ ಪೇ ಸೇವೆಗೆ ಚಾಲನೆ

ಅಲಂಕಾರು: ಡಿಜಿ ಪೇ ಸೇವೆಗೆ ಚಾಲನೆ

ಅಲಂಕಾರು: ಡಿಜಿ ಪೇ ಸೇವೆಗೆ ಚಾಲನೆ

 

ಅಲಂಕಾರು: ಡಿಜಿ ಪೇ ಸೇವೆಗೆ ಚಾಲನೆ

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕಡಬ ತಾಲೂಕಿನ ಅಲಂಕಾರು ವಲಯದಲ್ಲಿ ಡಿಜೀ ಪೇ ಸೇವೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ದುರ್ಗಾಂಬಾ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಶ್ರೀಪತಿ ಅವರು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ಆಧುನಿಕ ಬ್ಯಾಂಕಿಂಗ್ ಸೇವೆಗಳನ್ನು ಸುಲಭವಾಗಿ ತಲುಪಿಸುವಲ್ಲಿ ಡಿಜೀ ಪೇ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷ ಇಂದುಶೇಖರ್ ಶೆಟ್ಟಿ ಹಾಗೂ ಒಕ್ಕೂಟದ ಪದಾಧಿಕಾರಿ ರತ್ನ ಉಪಸ್ಥಿತರಿದ್ದರು.

ತಾಲೂಕು ನೋಡಲ್ ಅಧಿಕಾರಿ ರಕ್ಷಕ್ ಅವರು ಪ್ರಸ್ತಾವಿಕವಾಗಿ ಮಾತನಾಡಿ ವಾರದ ಹಣ ಸಂಗ್ರಹಣೆಯ ದಿನದಂದು ಸದಸ್ಯರು ಎಟಿಎಂ ಅಥವಾ ಬ್ಯಾಂಕ್‌ಗೆ ತೆರಳುವ ಅಗತ್ಯವಿಲ್ಲದೆ ಆಧಾರ್ ಕಾರ್ಡ್ ಬಳಸಿ ಡಿಜೀ ಪೇ ಮೂಲಕ ಸುಲಭವಾಗಿ ಹಣ ಪಡೆಯಬಹುದಾಗಿದೆ. ಈ ಸೌಲಭ್ಯದ ಪ್ರಯೋಜನವನ್ನು ಎಲ್ಲ ಸದಸ್ಯರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಅಲಂಕಾರು ವಲಯದ ಮೇಲ್ವಿಚಾರಕಿ ಲತಾ ಅವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಪ್ರೇಮ ವಂದಿಸಿದರು.

ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿಗಳು, ಸಂಘದ ಸದಸ್ಯರು ಹಾಗೂ ಗಣ್ಯರು ಭಾಗವಹಿಸಿ ಡಿಜೀ ಪೇ ಸೇವೆಯ ಕುರಿತು ಮಾಹಿತಿ ಪಡೆದುಕೊಂಡರು.

 

Leave a Reply

You May Have Missed

error: Content is protected !!