ಕರಾವಳಿ
# accident #kadaba #shiradi #nellyady #ksrtc, #KOKKADA: ಶಿಬಾಜೆ ಶ್ರೀಧರ ಕೊಲೆ ಪ್ರಕರಣಕ್ಕೆ ಮರು ತನಿಖೆ — ರಾಜ್ಯ ಸರ್ಕಾರದಿಂದ ಎಸ್ಐಟಿ ನೇಮಕ, #ಅರಸಿನಮಕ್ಕಿ ಬೂಡುಮುಗೇರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶೀರೂರು ಶ್ರೀ ವೇದವರ್ಧನ ಸ್ವಾಮೀಜಿ ಭೇಟಿ – ಪೂರ್ಣ ಕುಂಭ ಸ್ವಾಗತ, #ಉಜಿರೆ ಎಸ್ಡಿಎಂ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ಚಟುವಟಿಕೆಗಳ ಸಮಾರೋಪ, #ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯಲ್ಲಿ ಪ್ರತಿಭಾ ದಿನೋತ್ಸವ, #ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್, #ಕುಡ್ತಾಜೆ: ಶ್ರೀ ಉಳ್ಳಾಕ್ಲು ರುದ್ರ ಚಾಮುಂಡಿ, #ಗುಂಡ್ಯ: ಅಂಬ್ಯುಲೆನ್ಸ್ ವಾಹನ ಕಳವು ಪ್ರಕರಣ: ಆರೋಪಿ ಹಾಸನದಲ್ಲಿ ಬಂಧನ, #ಚಲನಚಿತ್ರ ನಟಿ ಶ್ರುತಿ ಕುಕ್ಕೆ ಸುಬ್ರಹ್ಮಣ್ಯ ಭೇಟಿ, #ಜ.22ರಂದು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ 108 ಕಾಯಿ ಗಣಹೋಮ, #ನೆಲ್ಯಾಡಿ ನಿವಾಸಿ ಕೆ.ಸಿ. ವರ್ಗೀಸ್ ಸಾವು ಪ್ರಕರಣ – ಶವ ಪರೀಕ್ಷೆಯಲ್ಲಿ ಬಯಲಾದ ರಹಸ್ಯ: ಬಲವಾದ ಪೆಟ್ಟುಗಳಿಂದ ಮರಣ, #ನೆಲ್ಯಾಡಿ: ಎಸ್ಸಿ/ಎಸ್ಟಿ ಫಲಾನುಭವಿಗಳಿಗೆ ಟ್ಯಾಂಕ್, #ನೆಲ್ಯಾಡಿ: ಪರವಾನಗಿ ಇಲ್ಲದೆ ಅಕ್ರಮ ಮರ ಸಾಗಾಟ ಪತ್ತೆ: ಲಾರಿ, #ರಾಮಕುಂಜ: ಬಾವಿ ತೋಡಲು ಸ್ಪೋಟಕ ಬಳಕೆ, #ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು – 11 ಕೆವಿ ಕಂಬ ತುಂಡು
0 Comments
ಜೆಸಿಐ ನೆಲ್ಯಾಡಿ ಘಟಕಕ್ಕೆ ವಲಯ ಉಪಾಧ್ಯಕ್ಷರ ಎರಡನೇ ಅಧಿಕೃತ ಭೇಟಿ











ನೆಲ್ಯಾಡಿ: ಜೆಸಿಐ ನೆಲ್ಯಾಡಿ ಘಟಕಕ್ಕೆ ವಲಯ ಉಪಾಧ್ಯಕ್ಷರ ಎರಡನೇ ಅಧಿಕೃತ ಭೇಟಿ ಕಾರ್ಯಕ್ರಮ ಭಾನುವಾರ ನೆಲ್ಯಾಡಿಯ ಗೌರಿಜಾಲ್ ಆರ್ಕೇಡ್ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಂಬರುವ ವಲಯ ಮಟ್ಟದ ಚಟುವಟಿಕೆಗಳು, ಘಟಕದ ಆಡಳಿತಾತ್ಮಕ ಬೆಳವಣಿಗೆ ಹಾಗೂ ಸದಸ್ಯರ ಸಂಘಟನಾ ಬಲವರ್ಧನೆ ಕುರಿತು ಸಮಗ್ರ ಚರ್ಚೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ನೆಲ್ಯಾಡಿ ಘಟಕದ ಅಧ್ಯಕ್ಷೆ ಪ್ರವೀಣಿ ಸುಧಾಕರ್ ವಹಿಸಿ, ಆಗಮಿಸಿದ ಅತಿಥಿಗಳು ಹಾಗೂ ಸದಸ್ಯರನ್ನು ಸ್ವಾಗತಿಸಿದರು.
ವಲಯ ಉಪಾಧ್ಯಕ್ಷ ಜಿತೇಶ್ ಎಲ್. ಪಿರೇರಾ ಅವರು ಮುಂಬರುವ ವಲಯ ಮಟ್ಟದ ಕಾರ್ಯಕ್ರಮಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಜೊತೆಗೆ, ಮುಂದಿನ ಸಾಲಿನ ಘಟಕದ ಆಡಳಿತ ಮಂಡಳಿಯ ರಚನೆ, ನಾಯಕತ್ವ ವಿಕಸನ, ಸಂಘಟನೆಯ ಬೆಳವಣಿಗೆ ಹಾಗೂ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಅಗತ್ಯ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಘಟಕದ ಸದಸ್ಯರ ಪುತ್ರ ಮಹಮ್ಮದ್ ಹಿಶಾಮ್ ಅವರು ಕರಾಟೆ ಹಾಗೂ ಕುಮಿಟೆ ವಿಭಾಗಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಜೆಸಿಐ ನೆಲ್ಯಾಡಿ ಘಟಕದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಸಿಐ ನೆಲ್ಯಾಡಿ ಘಟಕದ ಎಲ್ಲಾ ಸದಸ್ಯರು ಉಪಸ್ಥಿತರಿದರು, ಘಟಕದ ಕಾರ್ಯದರ್ಶಿ ನವ್ಯಪ್ರಸಾದ್ ವಂದಿಸಿದರು.



















Leave a Reply