ಪೆರಿಯಶಾಂತಿ: ಗುಡ್ಡ ಕುಸಿತ; ರಸ್ತೆಗೆ ಮರ ಉರುಳಿ ಕೆಲಕಾಲ ಸಂಚಾರ ಅಸ್ತವ್ಯಸ್ತ










ನೆಲ್ಯಾಡಿ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಕಡಬ ತಾಲೂಕಿನ ಪೆರಿಯಶಾಂತಿ ಸಮೀಪ ಭಾನುವಾರದಂದು ಗುಡ್ಡ ಕುಸಿದು, ಅದರೊಂದಿಗೆ ದೊಡ್ಡ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಗುಡ್ಡ ಕುಸಿತದಿಂದ ಮಣ್ಣು ಹಾಗೂ ಮರ ರಸ್ತೆ ಮಧ್ಯೆ ಬಿದ್ದ ಕಾರಣ ಎರಡೂ ದಿಕ್ಕಿನ ವಾಹನಗಳು ಕೆಲ ಸಮಯ ಸಂಚರಿಸಲು ಸಾಧ್ಯವಾಗದೆ ಚಾಲಕರು ಪರದಾಡುವಂತಾಯಿತು. ವಿಷಯ ತಿಳಿದ ಕೂಡಲೇ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಗುತ್ತಿಗೆ ಸಂಸ್ಥೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಜೆಸಿಬಿ ಯಂತ್ರದ ಸಹಾಯದಿಂದ ರಸ್ತೆಗೆ ಬಿದ್ದಿದ್ದ ಮಣ್ಣು ಹಾಗೂ ಮರವನ್ನು ತೆರವುಗೊಳಿಸಿದರು.


















Leave a Reply