ಪಟ್ಲಡ್ಕ: ಕೊರಗಜ್ಜನಿಗೆ ಬೆಳ್ಳಿಯ ಮುಟ್ಟಾಳೆ ಮತ್ತು ಆಭರಣ ಸಮರ್ಪಣೆ

ಪಟ್ಲಡ್ಕ: ಕೊರಗಜ್ಜನಿಗೆ ಬೆಳ್ಳಿಯ ಮುಟ್ಟಾಳೆ ಮತ್ತು ಆಭರಣ ಸಮರ್ಪಣೆ

ನೇಸರ ಎ15: ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಪಟ್ಟಡ್ಕ ಶ್ರೀ ಕೊರಗಜ್ಜ ದೈವದ ಸನ್ನಿಧಾನದಲ್ಲಿ ಭಕ್ತರೊಬ್ಬರು ಎ.14 ರಂದು ಅಜ್ಜನಿಗೆ ಭಕ್ತಿ ಪೂರ್ವಕವಾಗಿ ಬೆಳ್ಳಿಯ ಮುಟ್ಟಾಳೆ, ಬೆಳ್ಳಿಯ ಮುಖವಾಡ ಮತ್ತು ಗುಂಡು ಮಾಲೆ ಸರವನ್ನು ಅರ್ಪಿಸಿದರು. ಮಂಗಳೂರಿನ ಆಭರಣ ತಯಾರಕರು ಸುರೇಶ್ ಆಚಾರ್ಯರ ನೇತೃತ್ವದಲ್ಲಿ ಅಜ್ಜನ ಸನ್ನಿದಾನ ಕ್ಕೆ ಆಭರಣಗಳನ್ನು ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ತುಕ್ರಪ್ಪ ಶೆಟ್ಟಿ ನೂಜೆ, ವಿಠಲ ಶೆಟ್ಟಿ ನೂಜೆ, ವಿಶ್ವನಾಥ ಪಟ್ಲಡ್ಕ, ಮಹೇಶ್ ಪಿ, ಹರೀಶ್ ಪಟ್ಲಡ್ಕ, ರುಕ್ಮಯ ಮಡಿವಾಳ, ಪ್ರಕಾಶ್ ರೈ, ದೀಕ್ಷಾ ಅಂಚನ್, ಆನಂದ ನೆಲ್ಯಾಡಿ, ಬಾಬು, ಶೀನ, ಸ್ವಾಮಿ ಕೊರಗಜ್ಜ ಬಳಗದ ಎಲ್ಲಾ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

 

—ಜಾಹೀರಾತು—

Leave a Reply

You May Have Missed

error: Content is protected !!