ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಆಶ್ರಿತಾ ಕೆ ಎಂ ಗೆ ವಿಜ್ಞಾನ ವಿಭಾಗದಲ್ಲಿ 8ನೇ ರಾಂಕ್

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಆಶ್ರಿತಾ ಕೆ ಎಂ ಗೆ ವಿಜ್ಞಾನ ವಿಭಾಗದಲ್ಲಿ 8ನೇ ರಾಂಕ್

ನೇಸರ ಎ.23: 2020 – 21 ನೇ ಸಾಲಿನಲ್ಲಿ ನಡೆದ ಮಂಗಳೂರು ವಿವಿ ಮಟ್ಟದ ಪದವಿ ಪರೀಕ್ಷೆಯ ರಾಂಕ್ ಪಟ್ಟಿ ಪ್ರಕಟಗೊಂಡಿದ್ದು, ವಿಜ್ಞಾನ ವಿಭಾಗದಲ್ಲಿ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಆಶ್ರಿತಾ ಕೆ ಎಂ 8ನೇ ರಾಂಕ್ ಪಡೆದುಕೊಂಡಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ರುದ್ರಕುಮಾರ್ ಎಂ ಎಂ ತಿಳಿಸಿರುತ್ತಾರೆ.
ಇವರು ಮಂಗಳೂರು ವಿ ವಿ ಯ ಆರು ಸೆಮಿಸ್ಟರ್ ಪರೀಕ್ಷೆಗಳ ಒಟ್ಟು 4200 ಅಂಕಗಳಲ್ಲಿ 4022 ಅಂಕಗಳನ್ನು ಪಡೆದು 95.76% ಗಳಿಸುವುದರೊಂದಿಗೆ 8ನೇ ರಾಂಕ್ ಪಡೆದಿದ್ದಾಳೆ. ಪ್ರಸ್ತುತ ಮಂಗಳೂರು ವಿ.ವಿಯಲ್ಲಿ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಈಕೆ ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆಯ ಕೀಲಾರ್ ಕಜೆ ಮಹಾಲಿಂಗೇಶ್ವರ ಭಟ್ ಮತ್ತು‌ ಸರಸ್ವತಿ ಭಟ್ ದಂಪತಿಗಳ ಪುತ್ರಿ.
ಆಶ್ರಿತಾಳ ಈ ಸಾಧನೆಯನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ- ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

—ಜಾಹೀರಾತು—

Leave a Reply

You May Have Missed

error: Content is protected !!