ಎನ್ನೆಂಸಿ: ವಿಶ್ವ ರೆಡ್ ಕ್ರಾಸ್ ದಿನದ ಪ್ರಯುಕ್ತ ರಸಪ್ರಶ್ನೆ ಸ್ಪರ್ಧೆ

ಎನ್ನೆಂಸಿ: ವಿಶ್ವ ರೆಡ್ ಕ್ರಾಸ್ ದಿನದ ಪ್ರಯುಕ್ತ ರಸಪ್ರಶ್ನೆ ಸ್ಪರ್ಧೆ

ನೇಸರ ಮೇ‌.30: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ವಿಶ್ವ ರೆಡ್ ಕ್ರಾಸ್ ದಿನದ ಪ್ರಯುಕ್ತ ರೆಡ್ ಕ್ರಾಸ್ ಸದಸ್ಯರಿಗೆ ರಸ ಪ್ರಶ್ನೆ ಸ್ಪರ್ಧೆಯನ್ನು ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭಹಾರೈಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಸುಳ್ಯ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ.ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮಾಧಿಕಾರಿ ಡಾ.ಅನುರಾಧಾ ಕುರುಂಜಿ ರಸಪ್ರಶ್ನೆ ಸ್ಪರ್ಧೆ ನಡೆಸಿಕೊಟ್ಟರು. ಘಟಕ ನಾಯಕ ನಿರಂಜನ್.ಕೆ ವೇದಿಕೆಯಲ್ಲಿದ್ದರು. ಘಟಕ ನಾಯಕಿ ಲಿಮಿತಾ ಪಿ ಜೆ ನಿರೂಪಿಸಿ ವಂದಿಸಿದರು. ರಸ ಪ್ರಶ್ನೆ ಸ್ಪರ್ಧೆಯಲ್ಲಿ ಅಂಕಿತಾ, ಪ್ರಥಮ ಬಿ ಕಾಂ- ಪ್ರಥಮ, ಜ್ಞಾನಾ, ದ್ವಿತೀಯ ಬಿಬಿಎ – ದ್ವಿತೀಯ ಹಾಗೂ ಮೇಘಾ, ದ್ವಿತೀಯ ಬಿ ಎಸ್ಸಿ ತೃತೀಯ ಬಹುಮಾನವನ್ನು ಪಡೆದುಕೊಂಡರು.

ಜಾಹೀರಾತು

 

Leave a Reply

You May Have Missed

error: Content is protected !!