ನೆಕ್ಕಿಲಾಡಿ: ಎಸ್ಎಸ್ಎಲ್ ಸಿ ಸಾಧಕಿಗೆ ಜೇಸಿಐ ಉಪ್ಪಿನಂಗಡಿ ಘಟಕ ಸನ್ಮಾನ

ನೇಸರ ಜೂ.13: ಜೇಸಿಐ ಉಪ್ಪಿನಂಗಡಿ ಘಟಕದ ಆಡಳಿತ ಮಂಡಳಿಯ ಸಭೆ ಘಟಕದ ಕಾರ್ಯದರ್ಶಿ ಜೇಸಿ ಲವಿನಾ ಪಿಂಟೊ ಇವರ ಸ್ವಗೃಹದಲ್ಲಿ ನೆಕ್ಕಿಲಾಡಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪುತ್ತೂರು ಸರ್ಕಾರಿ ಪ್ರೌಢಶಾಲೆ ಶಾಂತಿನಗರ ಶಾಲೆಯ ಶ್ರೀಮತಿ ಮಮತಾ ಮತ್ತು ನಾರಾಯಣ ಸುಪುತ್ರಿ ಕುಮಾರಿ ಮಾನಸ ಎಸ್ಎಸ್ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ 625 ಕ್ಕೆ 612 ಅಂಕಗಳನ್ನು ಪಡೆದ ಸಾಧನೆ ಗುರುತಿಸಿ ಸನ್ಮಾನ ಮಾಡಲಾಯಿತು. ಪೂರ್ವಾಧ್ಯಕ್ಷ ಮತ್ತು ಮಧುರಾ ಡ್ರೈವಿಂಗ್ ಸ್ಕೂಲ್ ಮುಖ್ಯಸ್ಥರಾದ ಜೇಸಿ ಆನಂದ ರಾಮಕುಂಜ ಮತ್ತು ಜೇಸಿ ಹರೀಶ್ ನಟ್ಟಿಬೈಲು ಸನ್ಮಾಸಿದರು. ಜೇಸಿ ಮೋನಪ್ಪ ಪಮ್ಮನ ಮಜಲು, ಜೇಸಿ ಶಶಿಧರ್ ನೆಕ್ಕಿಲಾಡಿ, ಜೇಸಿ ಲವಿನಾ ಪಿಂಟೊ ಸಾಧಕರಿಗೆ ನಗದು ಬಹುಮಾನ ನೀಡಿ ಗೌರವಿಸಿದರು. ಘಟಕ ಅಧ್ಯಕ್ಷರಾದ ಜೇಸಿ ಮೋಹನ್ ಚಂದ್ರ ತೋಟದಮನೆ ಅಧ್ಯಕ್ಷತೆ ವಹಿಸಿದ್ದರು.ಜೇಸಿ ಶ್ರೀಮತಿ ಲವಿನಾ ಪಿಂಟೊ ವಂದಿಸಿದರು. ನಿಕಟಪೂರ್ವ ಅಧ್ಯಕ್ಷರಾದ ಜೇಸಿ ಕೆ.ವಿ.ಕುಲಾಲ್, ಕೋಶಾಧಿಕಾರಿ ಜೇಸಿ ಸುರೇಶ್ ಮತ್ತು ಇತರ ಜೇಸಿ ಸದಸ್ಯರು ಉಪಸ್ಥಿತರಿದ್ದರು.
ಜಾಹೀರಾತು




















Leave a Reply