ಎಸ್ ಅಂಗಾರ ಕೇವಲ ಸುಳ್ಯದ ಬಂಗಾರವಲ್ಲ, ಇಡೀ ರಾಜ್ಯದ ಬಂಗಾರ- ಸಿ ಡಿ ಪಿ ಓ ಶ್ರೀಲತಾ

ಎಸ್ ಅಂಗಾರ ಕೇವಲ ಸುಳ್ಯದ ಬಂಗಾರವಲ್ಲ, ಇಡೀ ರಾಜ್ಯದ ಬಂಗಾರ- ಸಿ ಡಿ ಪಿ ಓ ಶ್ರೀಲತಾ

ನೇಸರ ಜೂ.14: ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರರವರ ಸರಳ ಸಜ್ಜನ ನಡೆ ಆಡಳಿತ ಕಾರ್ಯಶೈಲಿಯು ಈಗಾಗಲೇ ಜನಮೆಚ್ಚುಗೆ ಪಡೆದಿದ್ದು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರೀತಿ ವಿಶ್ವಾಸ ಸಮನ್ವಯತೆಯೊಂದಿಗೆ ಕೆಲಸ ನಿರ್ವಹಿಸುತ್ತಾ ಸುಳ್ಯ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿದ್ದು ಇದಕ್ಕೆ ಸಾಕ್ಷಿ ಎಂಬಂತೆ ಇಂದು ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಳಾರ ಹಾಗೂ ಕಲ್ಲಂತಡ್ಕ ಅಂಗನವಾಡಿ ಕೇಂದ್ರಗಳ ಅಂಗನವಾಡಿ ಕೇಂದ್ರಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುತ್ತೂರು ಶಿಶು ಅಭಿವೃದ್ಧಿ ಅಧಿಕಾರಿಯವರು ಸಚಿವರ ಕಾರ್ಯಶೈಲಿಯನ್ನು ವಿವರಿಸುತ್ತಾ ಸಚಿವರಾಗಿದ್ದು ರಾಜ್ಯದ ಕೆಲಸದ ಜವಾಬ್ದಾರಿಯ ನಡುವೆಯೂ ಜನಸಾಮಾನ್ಯರ ಸಂಪರ್ಕಕ್ಕೆ ಸುಲಭವಾಗಿ ಲಭ್ಯವಾಗುವ ಎಸ್.ಅಂಗಾರ ಅವರು ಕೇವಲ ಸುಳ್ಯದ ಬಂಗಾರವಲ್ಲ ಇಡೀ ರಾಜ್ಯದ ಬಂಗಾರವೆಂದು ಅಭಿಮಾನದ ಮಾತುಗಳನ್ನಾಡಿದರು.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

You May Have Missed

error: Content is protected !!