ಶಿರ್ಲಾಲು: ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

ಶಿರ್ಲಾಲು: ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

ನೇಸರ ಜೂ.16: ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಶಿರ್ಲಾಲು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ 1ರಿಂದ 8ನೇ ತರಗತಿಯ ಮಕ್ಕಳಿಗೆ ಬೆಳ್ತಂಗಡಿ ತಾಲೂಕು ನೋಟರಿ ವಕೀಲ ಶ್ರೀ ಮುರಳಿಧರವರು ಶಾಲಾ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಿದರು. ಶ್ರೀಯುತರು ಕಳೆದ ನಾಲ್ಕೈದು ವರ್ಷಗಳಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಿಸುತ್ತಿದ್ದು, “ಶಿಕ್ಷಣ ಮತ್ತು ಸಂಸ್ಕಾರ ಪ್ರತಿ, ಮನೆ ಮತ್ತು ಮಗುವಿನ ಪ್ರಾಥಮಿಕ ಜವಾಬ್ದಾರಿಯಾದುದರಿಂದ ಸಮಾಜದ ಬದಲಾವಣೆ ಮತ್ತು ಅಭಿವೃದ್ಧಿಗಾಗಿ ಈ ಸಣ್ಣ ಪುಣ್ಯ ಕಾರ್ಯದಲ್ಲಿ ಭಾಗಿಯಾಗುತಿದ್ದೇನೆ ಎಂದು ನುಡಿದು ಮಕ್ಕಳಿಗೆ ಶುಭ ಹಾರೈಸಿದರು.

ಸಮಾರಂಭದಲ್ಲಿ ಶ್ರೀಮತಿ ಮನೋರಮ, ಮಯೂರ, ಮಂದಾರ, ಯಸ್ಡಿ.ಎಂ.ಸಿ ಅಧ್ಯಕ್ಷರಾದ ಅಶೋಕ್ ಕುಲಾಲ್, ಶಿರ್ಲಾಲು ಗ್ರಾಮ ಪಂಚಾಯತ್ ಸದಸ್ಯ ಸೋಮನಾಥ ಬಂಗೇರ, ಸಿ.ಎ. ಬ್ಯಾಂಕ್ ಕಾರ್ಯನಿರ್ವಾಹಣಾಧಿಕಾರಿ ಅಮ್ಮಾಜಿ ಕೋಟ್ಯಾನ್, ಮುಖ್ಯ ಅಧ್ಯಾಪಕರಾದ ಶ್ರೀಮತಿ ಸರೋಜಿನಿ.ಎಂ, ವಕೀಲರ ಸಿಬ್ಬಂದಿವರ್ಗ, ಎಸ್. ಡಿ.ಎಂ.ಸಿ ಸದಸ್ಯರು, ಪೋಷಕರು ಮತ್ತು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Previous post

ನೆಲ್ಯಾಡಿ: ವಿಶ್ವ ವಿದ್ಯಾಲಯ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಸಾಂಸ್ಕೃತಿಕ ಪ್ರತಿಭಾ ಆಯ್ಕೆ ಸ್ಪರ್ಧೆ ಮತ್ತು ವನಮಹೋತ್ಸವ ಕಾರ್ಯಕ್ರಮ

Next post

ಎನ್ನೆಂಸಿ: ಯುವ ರೆಡ್ ಕ್ರಾಸ್ ಘಟಕದಿಂದ ರಕ್ತದಾನದ ಮಹತ್ವದ ಕುರಿತ ಕರಪತ್ರ ಅನಾವರಣ

Leave a Reply

You May Have Missed

error: Content is protected !!