ಗೋಳಿತ್ತೊಟ್ಟು ಗ್ರಾ.ಪಂ. ಸಭಾಭವನದಲ್ಲಿ ವಿದ್ಯುತ್ ಅದಾಲತ್

ಗೋಳಿತ್ತೊಟ್ಟು ಗ್ರಾ.ಪಂ. ಸಭಾಭವನದಲ್ಲಿ ವಿದ್ಯುತ್ ಅದಾಲತ್

ನೇಸರ ಜೂ. 17: ಗೋಳಿತ್ತೊಟ್ಟು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜೂ.೧೮ರಂದು ವಿದ್ಯುತ್ ಅದಾಲತ್ ನಡೆಯಲಿದೆ.
ಗ್ರಾಮೀಣ ಜನತೆಯ ವಿದ್ಯುತ್ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರತಿ ತಿಂಗಳ ಮೂರನೇ ಶನಿವಾರ ದಂದು ವಿದ್ಯುತ್ ಅದಾಲತ್ ಹಮ್ಮಿಕೊಂಡಿದೆ. ಕಾರ್ಯಪಾಲಕ ಇಂಜಿನಿಯರ್ ಹಾಗೂ ಮೆಸ್ಕಾಂ ಅಧಿಕಾರಿಗಳು ಅದಾಲತ್‌ನಲ್ಲಿ ಭಾಗವಹಿಸಲಿದ್ದು ಗ್ರಾಹಕರ ಸಮಸ್ಯೆಯನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸಿಕೊಡಲಿದ್ದಾರೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಅದಾಲತ್‌ನಲ್ಲಿ ಭಾಗವಹಿಸಿ ವಿದ್ಯುತ್ ಸಮಸ್ಯೆಗಳ ಬಗ್ಗೆ ತಿಳಿಸಿ ಸೂಕ್ತ ಪರಿಹಾರ ಪಡೆದುಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

You May Have Missed

error: Content is protected !!