ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಉಜಿರೆ ಹಿಂದೂ ಸಂಘಟನೆಯಿಂದ ಪ್ರತಿಭಟನೆ

ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಉಜಿರೆ ಹಿಂದೂ ಸಂಘಟನೆಯಿಂದ ಪ್ರತಿಭಟನೆ

ನೇಸರ ಜು.07: ಉಜಿರೆ ಹಿಂದು‌ ಜಾಗರಣ ವೇದಿಕೆ‌ ತಾಲೂಕು ವತಿಯಿಂದ ರಾಜಸ್ಥಾನದ ಕನ್ಹಾಯ್ಯ ಲಾಲ್ ರವರನ್ನು ಭಯೋತ್ಪಾದಕರ ರೀತಿಯಲ್ಲಿ ಹತ್ಯೆ ನಡೆಸಿದ ‌ಕೃತ್ಯ ಖಂಡಿಸಿ, ಆರೋಪಿಗಳಿಗೆ ‌ಕೂಡಲೆ ಗಲ್ಲು‌ ಶಿಕ್ಷೆ ವಿಧಿಸಬೇಕು ಮತ್ತು ಇದರ ಹಿಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚ ಬೇಕೆಂದು ಬೃಹತ್‌ ಪ್ರತಿಭಟನೆ. ಉಜಿರೆ‌ ಜನಾರ್ದನ ‌ಸ್ವಾಮಿ‌ ವ್ರತ್ತದಲ್ಲಿ ಜು.6 ರಂದು ನಡೆಯಿತು
ಪ್ರತಿಭಟನೆಯಲ್ಲಿ ಮಾತೃ ಸುರಕ್ಷಾ ದಕ್ಷಿಣ ಪ್ರಾಂತ್ಯ ಪ್ರಮುಖ್ ಧನರಾಜ್ ಕೆದಿಲ ದಿಕ್ಸೂಚಿ ಭಾಷಣ ಮಾಡಿದರು. ಹಿರಿಯ ನಾಯಕ ಪದ್ಮನಾಭ ಶೆಟ್ಟಿಗಾರ್, ವಿ.ಹಿ ಪ ಪುತ್ತೂರು ಜಿಲ್ಲಾ ಉಪಾಧ್ಯಕ್ಷ ತಿಮ್ಮಪ್ಪ ಗೌಡ ಬೆಳಾಲು, ಜಿಲ್ಲಾ ಸಹ ಸಂಚಾಲಕ ಜಗದೀಶ್ ನೆತ್ತರಕೆರೆ, ತಾಲೂಕು ಸಂಚಾಲಕ ಯಶೋಧರ ಬೆಳಾಲು, ಸಹ ಸಂಚಾಲಕ ಸಚಿನ್ ಬಜ, ಹಿರಿಯರಾದ ರಘುನಾಥ್ ಶೆಣೈ, ಲೋಕಯ್ಯ, ನರಸಿಂಹ ಮಾಣಿ, ಹಿಂದೂ ಸಂಘಟನೆಯ ಕಾರ್ಯಕರ್ತರು, ಊರ ನಾಗರಿಕರು ಹಾಜರಿದ್ದರು
.

Leave a Reply

You May Have Missed

error: Content is protected !!