ಕೊಕ್ಕಡ ಜಾನುವಾರು ಅಕ್ರಮ ಸಾಗಾಟ ಪತ್ತೆ – ಪಿಕಪ್ ಸಹಿತ ಆರೋಪಿ ಪೊಲೀಸರು ವಶಕ್ಕೆ

ಕೊಕ್ಕಡ ಜಾನುವಾರು ಅಕ್ರಮ ಸಾಗಾಟ ಪತ್ತೆ – ಪಿಕಪ್ ಸಹಿತ ಆರೋಪಿ ಪೊಲೀಸರು ವಶಕ್ಕೆ

ನೇಸರ ನ20: ಪಿಕಪ್ ವಾಹನವೊಂದರಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಘಟನೆ ಕೊಕ್ಕಡ ಗ್ರಾಮದ ತಿಪ್ಪೆಮಜಲು ಎಂಬಲ್ಲಿ ನ.20ರಂದು ಬೆಳಿಗ್ಗೆ ನಡೆದಿದೆ. ಜಾನುವಾರು ಹಾಗೂ ಪಿಕಪ್ ಸಹಿತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಬೆಳ್ತಂಗಡಿ ತಾಲೂಕಿನ ಪಾಂಡಿಬೆಟ್ಟು ಎಂಬಲ್ಲಿಂದ ಕೊಕ್ಕಡ ಸಮೀಪದ ಮಲ್ಲಿಗೆಮಜಲು ಎಂಬಲ್ಲಿ ಪಿಕಪ್ ವಾಹನದಲ್ಲಿ ಎರಡು ಗೋವುಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಕೊಕ್ಕಡ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಕೊಕ್ಕಡ ಗ್ರಾಮದ ತಿಪ್ಪೆಮಜಲು ಎಂಬಲ್ಲಿ ನ.20 ರಂದು ಬೆಳಿಗ್ಗೆ 7 ಗಂಟೆ ವೇಳೆಗೆ ಪಿಕಪ್ ವಾಹನ ತಡೆದು ಧರ್ಮಸ್ಥಳ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪಿಕಪ್, ಜಾನುವಾರು ಹಾಗೂ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Leave a Reply

You May Have Missed

error: Content is protected !!