ನೆಲ್ಯಾಡಿ ಸಂತ ಜಾರ್ಜ್ ಪ್ರೌಢಶಾಲೆಯಲ್ಲಿ ಅಕ್ಷರದಾಸೋಹದ ಅಡುಗೆ ಸಿಬ್ಬಂದಿ ನಿಧನ

ನೆಲ್ಯಾಡಿ ಸಂತ ಜಾರ್ಜ್ ಪ್ರೌಢಶಾಲೆಯಲ್ಲಿ ಅಕ್ಷರದಾಸೋಹದ ಅಡುಗೆ ಸಿಬ್ಬಂದಿ ನಿಧನ

ನೇಸರ ಆ.08: ನೆಲ್ಯಾಡಿ ಸಂತ ಜಾರ್ಜ್ ಪ್ರೌಢಶಾಲೆಯಲ್ಲಿ ಅಕ್ಷರದಾಸೋಹದ ಅಡುಗೆ ಸಿಬ್ಬಂದಿಯಾಗಿ ಸುಮಾರು 12ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಆಲೀಸ್ (56ವರ್ಷ)ರವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಯೇನಪೋಯ ಆಸ್ಪತ್ರೆಯಲ್ಲಿ ಆ.4 ರಂದು ನಿಧನರಾಗಿದ್ದಾರೆ.
ಇವರು ಆರ್ಲದ ನಿವಾಸಿಯಾಗಿದ್ದು ಪತಿ ಕುಟ್ಟಪ್ಪನ್, ಹಾಗೂ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇವರ ಅಂತ್ಯ ಸಂಸ್ಕಾರದ ವಿಧಿವಿಧಾನವು ಆ.5ರಂದು ಕೊಣಾಲಿನ ಸೈಂಟ್ ಮೇರೀಸ್ ಚರ್ಚ್ ನಲ್ಲಿ ನೆರವೇರಿದ್ದು.
ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕರಾದ ಅಬ್ರಹಾಂ ವರ್ಗೀಸ್ ರವರು, ವಿದ್ಯಾಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಅಂತಿಮ ನಮನ ಸಲ್ಲಿಸಿದರು.

Leave a Reply

You May Have Missed

error: Content is protected !!