ಉಜಿರೆ: ಜೈನ್ ಮಿಲನ್ ಆಹಾರೋತ್ಸವ

ಉಜಿರೆ: ಜೈನ್ ಮಿಲನ್ ಆಹಾರೋತ್ಸವ

ನೇಸರ ಆ.08: ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ವತಿಯಿಂದ ಆಹಾರೋತ್ಸವ ಕಾರ್ಯಕ್ರಮ ಉಜಿರೆಯಲ್ಲಿ ಜರಗಿತು.
ಆಹಾರೋತ್ಸವದ ಮಹತ್ವವದ ಕುರಿತು ನಿರ್ದೇಶಕ ಬಿ .ಸೋಮಶೇಖರ ಶೆಟ್ಟಿ ತಿಳಿಸಿದರು. ಪ್ರೊ.ದಿನೇಶ್ ಚೌಟ ರವರು ನಮ್ಮ ಆಹಾರ ಪದ್ಧತಿಯ ಕುರಿತು ಅಭಿಪ್ರಾಯ ವ್ಯಕ್ತ ಪಡಿಸಿದರು.

ವಲಯ ನಿರ್ದೇಶಕ ವೀರ್ ಬಿ.ಪ್ರಮೋದ್ ಕುಮಾರ್ ನಮ್ಮ ಸಂಸ್ಕೃತಿಯ ಬಗ್ಗೆ ಮಾತನಾಡಿದರು. ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಡಾ.ಸತೀಶ್ಚಂದ್ರ ಸುರ್ಯಗುತ್ತು ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತಿರಾಜ್ ಜೈನ್ ವಹಿಸಿದ್ದರು. ಕೋಶಾಧಿಕಾರಿ ನಿಖಿತಾ ಸ್ವಾಗತಿಸಿದರು. ಪ್ರೇಮಾ ಅನಂತ್ರಾಜ್ ವಂದಿಸಿದರು. ಕಾರ್ಯದರ್ಶಿ ವೀರ್ ಸಂಪತ್ ಕುಮಾರ್ ನಿರೂಪಿಸಿದರು.

Leave a Reply

You May Have Missed

error: Content is protected !!