ಪ್ಲಾಸ್ಟಿಕ್ ಬಳಕೆ ಕಡಿವಾಣಕ್ಕೆ ಜಾಗೃತಿ

ಪ್ಲಾಸ್ಟಿಕ್ ಬಳಕೆ ಕಡಿವಾಣಕ್ಕೆ ಜಾಗೃತಿ

ನೇಸರ ಆ.11: ಹಸಿರು ತಪಸ್ಸು ಸಂಘಟನೆಯ ಮನವಿಯಂತೆ ಮುಂಡಾಜೆ ಹಾಗೂ ಕಲ್ಮಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇಟೆಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಸೋಮಂತಡ್ಕ ಪೇಟೆಯಲ್ಲಿ ಜಾಗೃತಿ ಕಾರ್ಯಕ್ರಮ ಗುರುವಾರ ನಡೆಯಿತು.

ಪೇಟೆಯ ಅಂಗಡಿಗಳಿಗೆ ತೆರಳಿ ಪ್ಲಾಸ್ಟಿಕ್ ಬಳಕೆ ತಡೆಯಲು ಮನವಿ ಮಾಡಲಾಯಿತು.
ಹಸಿರು ತಪಸ್ಸು ಸಂಘಟನೆಯ ನಾರಾಯಣ ಫಡಕೆ, ಸತೀಶ್ ಭಟ್, ಸಚಿನ್ ಭಿಡೆ, ಪಂಚಾಯಿತಿ ಉಪಾಧ್ಯಕ್ಷೆ ದಿಶಾ ಪಟವರ್ಧನ್, ಪಿಡಿಒ ಸುಮಾ ಎ.ಎಸ್, ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.

Leave a Reply

You May Have Missed

error: Content is protected !!