ಚಾರ್ಮಾಡಿ ಘಾಟಿ ಕೆಟ್ಟು ನಿಂತ ಲಾರಿಗಳು ಟ್ರಾಫಿಕ್ ಜಾಮ್

ಚಾರ್ಮಾಡಿ ಘಾಟಿ ಕೆಟ್ಟು ನಿಂತ ಲಾರಿಗಳು ಟ್ರಾಫಿಕ್ ಜಾಮ್

ನೇಸರ ಆ.11: ಚಾರ್ಮಾಡಿ ಘಾಟಿ ರಸ್ತೆ ಮಧ್ಯದಲ್ಲಿ ಎರಡು ಲಾರಿಗಳು ಕೆಟ್ಟು ನಿಂತ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ಕಿಲೋಮಿಟರ್ ಗಟ್ಟಲೆ ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾದ ಘಟನೆ ಗುರುವಾರ ನಡೆದಿದೆ.
ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಘಾಟಿ ವಿಭಾಗದ ಮೂಡಿಗೆರೆ ತಾಲೂಕಿನ ಅಲೆಖಾನ್ ಹೊರಟ್ಟಿ ಸಮೀಪ ಎರಡು ಲಾರಿಗಳು ಕೆಟ್ಟು ನಿಂತು ಸಂಚಾರ ಅಸ್ತವ್ಯಸ್ತಗೊಂಡಿತು. ಕೆಲವು ವಾಹನ ಸವಾರರು ಘಾಟಿ ರಸ್ತೆಯ ತಡೆ ಬೇಲಿಯನ್ನು ಮುರಿದು ಸಂಚಾರ ನಡೆಸಿದರು. ಬಣಕಲ್ ಪೊಲೀಸರು ಸ್ಥಳಕ್ಕಾಗಮಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.
ಉಜಿರೆಯಿಂದ ಮೆಕ್ಯಾನಿಕ್ ನ್ನು ಕರೆಸಿ ರಸ್ತೆ ಮಧ್ಯೆ ಕೆಟ್ಟಿದ್ದ ಒಂದು ಲಾರಿಯನ್ನು ದುರಸ್ತಿ ಪಡಿಸಿ ತೆರವುಗೊಳಿಸಲಾಯಿತು. ಇನ್ನೊಂದು ಲಾರಿಯ ಚಾಲಕ ಸ್ಥಳದಲ್ಲಿಲ್ಲದ ಕಾರಣದಿಂದ ತಕ್ಷಣ ವಾಹನ ತೆರವುಗೊಳಿಸಲು ಸಾಧ್ಯವಾಗಿಲ್ಲ.

Leave a Reply

You May Have Missed

error: Content is protected !!