ಜವಾಹರ ನವೋದಯ ಆರನೇ ತರಗತಿಯ ಆನ್ಲೈನ್ ಅರ್ಜಿಸಲ್ಲಿಕೆಯಲ್ಲಿ ಬದಲಾವಣೆ

ಜವಾಹರ ನವೋದಯ ಆರನೇ ತರಗತಿಯ ಆನ್ಲೈನ್ ಅರ್ಜಿಸಲ್ಲಿಕೆಯಲ್ಲಿ ಬದಲಾವಣೆ

ನೇಸರ ನ 26: ಜವಾಹರ ನವೋದಯ ವಿದ್ಯಾಲಯಗಳಲ್ಲಿ 2022 -23 ನೇ ಸಾಲಿನಲ್ಲಿ ಆರನೇ ತರಗತಿಯ ಪ್ರವೇಶಕ್ಕಾಗಿ 2022ರ ಆಯ್ಕೆ ಪರೀಕ್ಷೆ ಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಪೋರ್ಟಲ್ ತೆರೆಯಲಾಗಿದೆ. ಅರ್ಹ ಅಭ್ಯರ್ಥಿಗಳು ಈ ಪೋರ್ಟಲ್ www.navodaya.gov.in ಮೂಲಕ ಅರ್ಜಿ ಸಲ್ಲಿಸಬಹುದು ಆಡಳಿತಾತ್ಮಕ ಕಾರಣಗಳಿಗಾಗಿ ಪ್ರಮಾಣಪತ್ರಗಳು ಸಂಬಂಧಪಟ್ಟ ಮುಖ್ಯೋಪಾಧ್ಯಾಯರಿಂದ ದೃಢೀಕರಣ ಗೊಂಡಿರಬೇಕು ಎಂದು ತೀರ್ಮಾನಿಸಲಾಗಿದೆ, ಎಲ್ಲಾ ಅಭ್ಯರ್ಥಿಗಳು ತಮ್ಮ ವಿವರಗಳನ್ನು ಪರಿಷ್ಕೃತ ಅರ್ಜಿಫಾರಂಗಳಲ್ಲಿ ತುಂಬಬೇಕು ಮತ್ತು ಅವನ್ನು ಸಂಬಂಧಿತ ಮುಖ್ಯೋಪಾಧ್ಯಾಯರಿಂದ ದೃಢೀಕರಿಸಬೇಕೆಂದು ವಿನಂತಿಸಿಕೊಳ್ಳಲಾಗಿದೆ. ಅಭ್ಯರ್ಥಿಗಳು ದೃಢೀಕೃತ ಪ್ರಮಾಣಪತ್ರಗಳನ್ನು ಅಪ್ ಲೋಡ್ ಮಾಡಬೇಕೆಂದು ಕೋರಲಾಗಿದೆ. ಅಭ್ಯರ್ಥಿಗಳು ಈಗಾಗಲೇ ತಮ್ಮ ಅರ್ಜಿಗಳನ್ನು ಸಲ್ಲಿಸಿದ್ದರೆ ಅಪ್ಲೋಡ್ ಮಾಡಿದ ಪ್ರಮಾಣಪತ್ರಗಳನ್ನೇ ಸಂಬಂಧಪಟ್ಟ ಮುಖ್ಯೋಪಾಧ್ಯಾಯರಿಂದ ದೃಢೀಕರಿಸಿ,
ತಮ್ಮ ಜಿಲ್ಲೆಗೆ ಸಂಬಂಧಿಸಿದ ಜವಾಹರ ನವೋದಯ ವಿದ್ಯಾಲಯಗಳ ಪ್ರಾಚಾರ್ಯರಿಗೆ ಸಲ್ಲಿಸಬೇಕು. ಪರಿಷ್ಕರಿಸಿದ ಅರ್ಜಿಗಳನ್ನು ಪಡೆದುಕೊಳ್ಳಲು ಈಜಾಲತಾಣವನ್ನು ಸಂಪರ್ಕಿಸುವುದು : www.navodaya.gov.in ಎಂದು ತಿಳಿಸಲಾಗಿದೆ.

Leave a Reply

You May Have Missed

error: Content is protected !!