ರಾಷ್ಟ್ರೀಯ ಸಂವಿಧಾನ ದಿನದ ಆಚರಣೆ : ನೆಲ್ಯಾಡಿ

ರಾಷ್ಟ್ರೀಯ ಸಂವಿಧಾನ ದಿನದ ಆಚರಣೆ : ನೆಲ್ಯಾಡಿ

ನೇಸರ ನ 26: ನೆಲ್ಯಾಡಿಯ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜುನಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಏಲಿಯಾಸ್.ಎಂ.ಕೆ. ಸಂವಿಧಾನದ ಪೂರ್ವ ಪೀಠಿಕೆಯನ್ನು ವಿದ್ಯಾವಂತರಾದ ನಾವೆಲ್ಲರೂ ಓದಿ ಅರ್ಥೈಸಿಕೊಳ್ಳಬೇಕು ಮತ್ತು ಸಾಮಾಜಿಕ, ಧಾರ್ಮಿಕ ವೈಷಮ್ಯತೆ ಗಳನ್ನು ತೊಡೆದುಹಾಕಿ ಸಹೋದರತೆಯಿಂದ ಸಮಾಜದಲ್ಲಿ ಬದುಕಿ ಬಾಳಬೇಕು ಎಂದು ನುಡಿದರು.

ಸಂವಿಧಾನದ ಪೀಠಿಕೆಯನ್ನು ಓದುವುದರ ಮೂಲಕ ಪ್ರತಿಜ್ಞಾ ವಿಧಿಯನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಘಟಕದ ಕಾರ್ಯಕ್ರಮಾಧಿಕಾರಿ ವಿಶ್ವನಾಥ್ ಶೆಟ್ಟಿ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!