ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ; ಸಾವಿರಾರು ಮಂದಿ ಭಾಗಿ – ಬಿಗಿ ಪೊಲೀಸ್ ಬಂದೋ ಬಸ್ತ್

ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ; ಸಾವಿರಾರು ಮಂದಿ ಭಾಗಿ – ಬಿಗಿ ಪೊಲೀಸ್ ಬಂದೋ ಬಸ್ತ್

ನೆಲ್ಯಾಡಿ : ದಕ್ಷಿಣ ಕನ್ನಡ ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ವರ್ಷ ಕಡಬ, ಸುಳ್ಯ, ಬೆಳ್ತಂಗಡಿ ತಾಲೂಕಿನ ಬಾಧಿತ ಗ್ರಾಮಸ್ಥರಿಂದ ಕಸ್ತೂರಿ ರಂಗನ್ ವರದಿ ವಿರುದ್ಧ ಬೃಹತ್ ಪ್ರತಿಭಟನೆ ಸಭೆ ಕಡಬ ತಾಲೂಕಿನ ಗುಂಡ್ಯದಲ್ಲಿ ಆರಂಭಗೊಂಡಿದೆ.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರತಿಭಟನಾ ಸಭೆ ಉದ್ಘಾಟಿಸಿದರು. ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಪ್ರಮುಖರಾದ ವಂ.ಫಾ.ಆದರ್ಶ್ ಗುತ್ತಿಗಾರು, ವಂ.ಫಾ.ಶಿಬಿ ಮುಂಡಾಜೆ, ವಂ.ಫಾ.ಜೋಸೆಫ್ ಶಿರಾಡಿ, ಫಾ. ವರ್ಗೀಸ್ ಕೈಪನಡ್ಕ, ವೆಂಕಪ್ಪ ಗೌಡ ಸುಳ್ಯ, ಸಂಜೀವ ಮಠಂದೂರು, ಸಕಲೇಶಪುರ ಶಾಸಕ ಮಂಜು, ಸಾಮಾಜಿಕ ಮುಂದಾಳು ರಘು, ಎ.ವಿ.ತೀರ್ಥರಾಮ, ಸಯ್ಯದ್ ಮೀರಾ ಸಾಹೇಬ್ ಕಡಬ, ಕೃಷ್ಣ ಶೆಟ್ಟಿ ಕಡಬ, ಪಿ.ಪಿ.ವರ್ಗೀಸ್ ಕಡಬ, ಸರ್ವೋತ್ತಮ ಗೌಡ ನೆಲ್ಯಾಡಿ, ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಆಶಾ ತಿಮ್ಮಪ್ಪ, ಮಹಮ್ಮದ್ ಆಲಿ ಹೊಸಮಠ, ಸುಧೀರ್ ಕುಮಾರ್, ವೆಂಕಟ್ ವಳಲಂಬೆ, ಪಿ. ಪಿ.ವರ್ಗೀಸ್, ಬಾಸ್ಕರ ಗೌಡ ಇಚಿಲಂಪಾಡಿ, ಬಾಲಕೃಷ್ಣ ಬಾಣಜಾಲು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಧನಂಜಯ ಕೋಡಂಗೆ ಸ್ವಾಗತಿಸಿದರು.

ಪ್ರತಿಭಟನಾ ಸಭೆಯಲ್ಲಿ ಮೂರು ತಾಲೂಕುಗಳ ಬಾಧಿತ ಗಳ ಸಾವಿರಾರು ಗ್ರಾಮಸ್ಥರು ಭಾಗವಹಿಸಿದ್ದರು. ಪೊಲೀಸ್ ಬಂದೋ ಬಸ್ತ್ ಒದಗಿಸಲಾಗಿತ್ತು.

Leave a Reply

You May Have Missed

error: Content is protected !!