ನಿಡ್ಲೆ: ಬೂಡುಜಾಲು ಸಮೀಪದ ಕೂವೆ ಎಂಬಲ್ಲಿ ವ್ಯಕ್ತಿಯ ಶವ ಪತ್ತೆ.

ನಿಡ್ಲೆ: ಬೂಡುಜಾಲು ಸಮೀಪದ ಕೂವೆ ಎಂಬಲ್ಲಿ ವ್ಯಕ್ತಿಯ ಶವ ಪತ್ತೆ.

ನಿಡ್ಲೆ : ಇಲ್ಲಿಯ ಬೂಡುಜಾಲು ಸಮೀಪದ ಕೂವೆ ಎಂಬಲ್ಲಿ ಕಪಿಲ ನದಿಯ ಪಕ್ಕದಲ್ಲಿ ವ್ಯಕ್ತಿಯ ಶವವು ಪತ್ತೆಯಾದ ಘಟನೆ ನ.15 ರಂದು ಬೆಳಿಗ್ಗೆ ನಡೆದಿದೆ. 

ಕಪಿಲ ನದಿಯ ಪಕ್ಕದಲ್ಲಿ ವ್ಯಕ್ತಿಯ ಶವವು ಪತ್ತೆಯಾಗಿದ್ದು ಸ್ಥಳೀಯರು ನಡೆದುಕೊಂಡು ಹೋಗುವ ವೇಳೆ ಮೃತದೇಹವನ್ನು ಕಂಡು ತಕ್ಷಣ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಮೃತದೇಹವು ಈ ಪರಿಸರದವರದ್ದೇ ಅಥವಾ ಅಪರಿಚಿತರದ್ದೋ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

Leave a Reply

You May Have Missed

error: Content is protected !!