ಅರಸಿನಮಕ್ಕಿ: ಕಾಡು ಹಿತ್ತಿಲು ನಿವಾಸಿ ವೈಕುಂಠ ಹೆಬ್ಬಾರ್ ನಿಧನ

ಅರಸಿನಮಕ್ಕಿ: ಕಾಡು ಹಿತ್ತಿಲು ನಿವಾಸಿ ವೈಕುಂಠ ಹೆಬ್ಬಾರ್ ನಿಧನ

ಅರಸಿನಮಕ್ಕಿ: ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ಸಮೀಪದ ಕಾಡು ಹಿತ್ತಿಲು ನಿವಾಸಿ ವೈಕುಂಠ ಹೆಬ್ಬಾರ್ (92) ವಯೋ ಸಹಜ ಕಾಯಿಲೆಯಿಂದ ನ.26 ರಂದು ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಇವರು ನಿವೃತ್ತ ಶಿಕ್ಷಕರಾಗಿದ್ದು, ಅರಸಿನಮಕ್ಕಿ, ಕುಕ್ಕುಜಡ್ಕ, ಬದನಾಜೆ, ಕೊಕ್ಕಡ, ಕೆಯ್ಯೂರು, ಮುಂಡಾಜೆ, ನೇಲ್ಯಡ್ಕ, ಹೊಸ್ತೋಟ, ಶಿಬಾಜೆ ಶಾಲೆಗಳಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಯಕ್ಷಗಾನ ಕಲಾವಿದರಾಗಿದ್ದ ಇವರು ತಮ್ಮ ಊರಿನಲ್ಲಿ ಹಲವು ಸಂಘ ಸಂಸ್ಥೆಗಳು ಸ್ಥಾಪನೆಗೊಳ್ಳಲು ಕಾರಣಕರ್ತರಾಗಿದ್ದರು.‌ ಗುಂಡ್ಯದ ಸಿರಿಬಾಗಿಲು ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಅನುವಂಶಿಯ ಆಡಳಿತ ಮೊಕ್ತೇಸರರಾಗಿದ್ದ ಇವರು ತಮ್ಮ ಸ್ವಇಚ್ಛೆಯಿಂದ ನಿವೃತ್ತಿ ಪಡೆದಿದ್ದರು.

Leave a Reply

You May Have Missed

error: Content is protected !!