ಕೊಕ್ಕಡ: ತಂಗಿ ಹಾಗೂ ಆಕೆಯ ಗಂಡನ ಜಗಳ ನಿಲ್ಲಿಸಲು ಹೋದ ಅಣ್ಣನ ಮೇಲೆ ಹಲ್ಲೆ : ಪ್ರಕರಣ ದಾಖಲು

ಕೊಕ್ಕಡ: ತಂಗಿ ಹಾಗೂ ಆಕೆಯ ಗಂಡನ ಜಗಳ ನಿಲ್ಲಿಸಲು ಹೋದ ಅಣ್ಣನ ಮೇಲೆ ಹಲ್ಲೆ : ಪ್ರಕರಣ ದಾಖಲು

ಕೊಕ್ಕಡ: ತಂಗಿ ಹಾಗೂ ತಂಗಿಯ ಗಂಡ ಜಗಳವಾಡುವುದನ್ನು ತಡೆಯಲು ಹೋದ ಅಣ್ಣನ ಮೇಲೆ ತಂಗಿಯ ಗಂಡ ಅವಾಚ್ಯ ಶಬ್ದಗಳಿಂದ ಬೈಯ್ದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನವೆಂಬರ್ 25 ರಂದು ಕೌಕ್ರಾಡಿ ಗ್ರಾಮದ ಪಟ್ಲಡ್ಕ ಎಂಬಲ್ಲಿ ನಡೆದಿದೆ. ಪ್ರಕರಣ ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗಿದೆ.
ಕೊಕ್ಕಡ ಸಮೀಪದ ಬೋಳದ ಬೈಲು ನಿವಾಸಿ ಮಹಮ್ಮದ್ ಶರೀಫ್ (42) ಗಾಯಾಳುವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ :
ನವೆಂಬರ್ 25 ರಂದು ಮಹಮ್ಮದ್ ಶರೀಫ್ ಅವರ ತಾಯಿ ಶರೀಫ್ ಅವರಿಗೆ ಕರೆ ಮಾಡಿ ತಂಗಿ ಹಾಗು ಅವಳ ಗಂಡ ಜಗಳವಾಡುತ್ತಿದ್ದಾರೆಂದು ತಿಳಿಸಿದ್ದಾರೆ. ತಕ್ಷಣ ತಂಗಿ ಮನೆಗೆ ಬಂದು ವಿಚಾರಿಸಿದ್ದಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ಅಜೀಜ್ ರವರು ಶರೀಫ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕುತ್ತಿಗೆ ಭಾಗಕ್ಕೆ ಕಡಿಯಲು ಮುಂದಾದರು. ತಪ್ಪಿಸಿಕೊಂಡಾಗ ಮಹಮ್ಮದ್ ಶರೀಫ್ ಅವರ ತಪ್ಪಿಸಿಕೊಂಡಾಗ ಎಡ ಕೈ ಅಂಗೈಗೆ ತಾಗಿ ಮೂಳೆ ಮುರಿತದ ರಕ್ತ ಗಾಯವಾಗಿದ್ದು ಎಡಗೈ ಅಂಗೈಗೆ ತಾಗಿ ರಕ್ತ ಗಾಯವಾಗಿದ್ದು, ನೆಲಕ್ಕೆ ಬಿದ್ದಾಗ ತಲೆಗೂ ಗುದ್ದಿದ ಗಾಯವಾಗಿದೆ.
ಈ ಸಂದರ್ಭ ಪರಿಚಯಸ್ಥ ಪ್ರವೀಣ್ ಮಹಮ್ಮದ್ ಶರೀಫ್ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ನ ಮೂಲಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಗಾಯಾಳು ಮಹಮ್ಮದ್ ಶರೀಫ್ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

You May Have Missed

error: Content is protected !!