ಶಿಶಿಲ:ಬೀಡಿ ಕಾರ್ಮಿಕರಿಗೆ ಮಾಹಿತಿ ಕಾರ್ಯಗಾರ

ಶಿಶಿಲ:ಬೀಡಿ ಕಾರ್ಮಿಕರಿಗೆ ಮಾಹಿತಿ ಕಾರ್ಯಗಾರ

ನೇಸರ ಡಿ.26: ಭಾರತೀಯ ಮಜ್ದೂರು ಸಂಘ ಗ್ರಾಮ ಸಮಿತಿ ಶಿಶಿಲ ಮತ್ತು ಬಿಜೆಪಿ ಗ್ರಾಮ ಸಮಿತಿ ಆಶ್ರಯದಲ್ಲಿ ಬೆಳ್ತಂಗಡಿ ಬೀಡಿ ಮಜ್ದೂರು ಸಂಘ ತಾಲೂಕು ಸಮಿತಿಯಿಂದ ಬೀಡಿ ಕಾರ್ಮಿಕರಿಗೆ ದಿನಾಂಕ 25-12-2021ರ ಶನಿವಾರ ಶಿಶಿಲ ಪಂಚಾಯತ್ ಸಭಾಂಗಣದಲ್ಲಿ ಮಾಹಿತಿ ಕಾರ್ಯಗಾರದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಶಿಲ ಗ್ರಾಮ ಸಮಿತಿ ಬಾರತೀಯ ಮಜ್ದೂರು ಸಂಘದ ಅಧ್ಯಕ್ಷ ಸುಬ್ಬಣ್ಣ ಗೌಡ ವಹಿಸಿದರು. ವೇದಿಕೆಯಲ್ಲಿ ತಾಲೂಕು ಬಿ.ಎಮ್.ಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್,ಬೀಡಿ ಮಜ್ದೂರು ಸಂಘದ ಸಂಚಾಲಕ ಚಂದ್ರಕಲಾ ಸಿ.ಕೆ, ಬಿ.ಎಮ್.ಎಸ್ ತಾಲೂಕು ಸಹಸಂಚಾಲಕ ಶಾಂತಪ್ಪ.ಶಶಿಕಲಾ ಕೊಯ್ಯೂರು. ಶಿಶಿಲ ಗ್ರಾಮ ಸಮಿತಿ ಬಿ.ಎಮ್.ಎಸ್ ಕಾರ್ಯದರ್ಶಿ ರಾಜ್ ಕಿಶೋರ್ ಉಪಸ್ಥಿತರಿದ್ದರು.ಧರ್ಮಸ್ತಳ ಬಿಜೆಪಿ ಶಕ್ತಿ ಕೇಂದ್ರ ಕಾರ್ಯದರ್ಶಿ ಕರುಣಾಕರ ಶಿಶಿಲ ಸ್ವಾಗತಿಸಿ. ಗ್ರಾಮ ಪಂಚಾಯತ್ ಸದಸ್ಯ ಸುಧಿನ್ ಶಿಶಿಲ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಿಶಿಲ ಗ್ರಾಮದ ಬೀಡಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

Leave a Reply

You May Have Missed

error: Content is protected !!