ಚೆಕ್ ಪೋಸ್ಟ್ ಗಳಿಗೆ ದಕ್ಷಿಣ ಕನ್ನಡ ಎಸ್‌ಪಿ ಡಾ|ವಿಕ್ರಮ್ ಅಮಟೆ ಭೇಟಿ; <strong>ಪರಿಶೀ</strong>ಲನೆ

ಚೆಕ್ ಪೋಸ್ಟ್ ಗಳಿಗೆ ದಕ್ಷಿಣ ಕನ್ನಡ ಎಸ್‌ಪಿ ಡಾ|ವಿಕ್ರಮ್ ಅಮಟೆ ಭೇಟಿ; ಪರಿಶೀಲನೆ

ಮಂಗಳೂರು:ಮುಂಬರುವ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ |ವಿಕ್ರಮ್ ಅಮಟೆ ಅವರು ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಅಂತಾರಾಜ್ಯ ಗಡಿಯಲ್ಲಿರುವ ಮುರೂರು, ಮಂಡೆಕೋಲು, ಕೊಲ್ಚಾರು, ನಾರ್ಕೋಡು,, ಕನ್ಯಾಣ, ಸಾರಡ್ಕ, ಸಾಕೇತುರು, ಆನೇಕಲ್ ಗಳಲ್ಲಿರುವ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಪೊಲೀಸ್ ಅಧಿಕಾರಿಗಳು ಸಿಬಂದಿಗಳಿಗೆ ಚುನಾವಣೆ ಕರ್ತವ್ಯ ಗಳ ಬಗ್ಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿ, ಚೆಕ್ ಪೋಸ್ಟ್ ಗಳಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.

ಚುನಾವಣೆ ಸೂಕ್ಷ್ಮ ಪ್ರದೇಶಗಳಾದ ಗುತ್ತಿಗಾರು ಹಾಗೂ ಜಾಲಸೂರು ಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಭೆ ನಡೆಸಿ, ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಕಾರ್ಯ ಮಾಡಿದರು. ಗುತ್ತಿಗಾರುವಿನಲ್ಲಿ ರೌಡಿ ಶೀಟರ್ ಗೆ ಎಚ್ಚರಿಕೆಯನ್ನು ನೀಡಿದರು. ಸುಳ್ಯ ಹಾಗೂ ವಿಟ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯ ಸೂಕ್ಷ್ಮ ಮತಗಟ್ಟೆ ಗಳಿಗೆ ಭೇಟಿ ನೀಡಿದರು.
ಕೇರಳ ರಾಜ್ಯದ ಗಡಿಯಲ್ಲಿರುವ ಆಡೂರ್ ಪೊಲೀಸ್ ಠಾಣೆಯ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಕೇರಳ ರಾಜ್ಯದ ಆಡೂರು ಪೊಲೀಸ್ ಠಾಣೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚೆಕ್ ಪೋಸ್ಟ್ ಗಳಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವಲ್ಲಿ ಸಹಕಾರ ನೀಡುವಂತೆ ಚರ್ಚೆ ನಡೆಸಿದ್ದಾರೆ.

Leave a Reply

You May Have Missed

error: Content is protected !!